Home ಟಾಪ್ ಸುದ್ದಿಗಳು ಅಕ್ಕ ತಂಗಿ ಮಧ್ಯೆ ಜಗಳ: ಮಧ್ಯೆ ಪ್ರವೇಶಿಸಿ ಅತ್ತಿಗೆಯನ್ನು ಕೊಂದ ತಂಗಿ ಗಂಡ

ಅಕ್ಕ ತಂಗಿ ಮಧ್ಯೆ ಜಗಳ: ಮಧ್ಯೆ ಪ್ರವೇಶಿಸಿ ಅತ್ತಿಗೆಯನ್ನು ಕೊಂದ ತಂಗಿ ಗಂಡ

ಬೆಂಗಳೂರು: ಮೊಬೈಲ್ಗಾಗಿ ಅಕ್ಕ ತಂಗಿಯರಿಬ್ಬರ ನಡುವೆ ಜಗಳ ನಡೆಯುವ ವೇಳೆ ತಂಗಿಯ ಗಂಡ ಜಗಳ ಬಿಡಿಸಲು ಹೋಗಿ ಅತ್ತಿಗೆಯನ್ನು ಕೊಲೆ ಮಾಡಿದ್ದಾನೆ. ಅಕ್ಕ ತಂಗಿಯ ಗಂಡನಿಗೆ ನಿಂದಿಸಿದ್ದಕ್ಕೆ ದೊಣ್ಣೆಯಿಂದ ಅತ್ತಿಗೆಯ ಮೇಲೆ ಹಲ್ಲೆ ಮಾಡಿದ್ದು, ಅತ್ತಿಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಹೊಸೂರು ಸಿಂಗಸಂದ್ರ ಬಳಿ ನಡೆದಿದೆ.

ಬಿಹಾರ ಮೂಲದ ಗುಡಿಯಾ ಬೇಬಿ (42) ಮೃತ ಮಹಿಳೆ. ರಾಜೇಶ್ ಕುಮಾರ್ ಅತ್ತಿಗೆಯನ್ನು ಕೊಲೆ ಗೈದಿದ್ದಾನೆ ಎಂದು ತಿಳಿದುಬಂದಿದೆ.

ಮೊಬೈಲ್ ಗಾಗಿ ಅಕ್ಕ ಗುಡಿಯಬೇಬಿ ಹಾಗೂ ತಂಗಿ ಗೀತಾ ಕುಮಾರಿ ಜಗಳ ಮಾಡುತ್ತಿದ್ದರು. ಜಗಳ ಬಿಡಿಸಲು ಬಂದಿದ್ದ ಗುಡಿಯ ತಂಗಿ ರಾಜೇಶ್ ಕುಮಾರ್ ನನ್ನು ಬೇಬಿ ನಿಂದಿಸಿದ್ದಾಳೆ ಎನ್ನಲಾಗಿದೆ. ಈ ವೇಳೆ ಸಿಟ್ಟಿನಿಂದ ಅತ್ತಿಗೆ ಮೇಲೆ ದೊಣ್ಣೆಯಿಂದ ರಾಜೇಶ್ ಥಳಿಸಿದ್ದಾನೆ.

ಹಲ್ಲೆಗೊಳಗಾದ ಗುಡಿಯ ಬೇಬಿ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಗುಡಿಯ ಬೇಬಿ ಸಾವನ್ನಪ್ಪಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version