ಬೆಳ್ತಂಗಡಿ: ತುಮಕೂರಿನಲ್ಲಿ ಹತ್ಯಗೀಡಾದ ಬೆಳ್ತಂಗಡಿ ತಾಲೂಕಿನ ಮೂವರು ವ್ಯಕ್ತಿಗಳ ಮನೆಗಳಿಗೆ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಸೋಮವಾರ ಬೆಳಿಗ್ಗೆ ಬೆಳ್ತಂಗಡಿಗೆ ಆಗಮಿಸಿದ್ದ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಮದ್ದಡ್ಕದ ಇಸಾಕ್ ಮನೆಗೆ, ಶಿರ್ಲಾಲಿನ ಇಮ್ತಿಯಾಜ್ ಯಾನೆ ಸಿದ್ದಿಕ್ ಮನೆಗೆ, ಉಜಿರೆಯ ಶಾಹುಲ್ ಹಮೀದ್ ಅವರ ಮನೆಗೆ ಭೇಟಿನೀಡಿ ಕುಟುಂಬದ ಸದಸ್ಯರುಗಳೊಂದಿಗೆ ಮಾತುಕತೆ ನಡೆಸಿದರು.