Home ಟಾಪ್ ಸುದ್ದಿಗಳು ಫುಟ್ ಬಾಲ್ ವಿಶ್ವಕಪ್ ನಿಂದ ರಷ್ಯಾವನ್ನು ಹೊರಹಾಕಿದ FIFA

ಫುಟ್ ಬಾಲ್ ವಿಶ್ವಕಪ್ ನಿಂದ ರಷ್ಯಾವನ್ನು ಹೊರಹಾಕಿದ FIFA

ಪ್ಯಾರಿಸ್: ಉಕ್ರೇನ್‌ ನ ಆಕ್ರಮಣದ ನಂತರ “ಮುಂದಿನ ಸೂಚನೆ ಬರುವವರೆಗೆ” ರಷ್ಯಾವನ್ನು 2022 ರ ವಿಶ್ವಕಪ್‌ ನಿಂದ ಹೊರಹಾಕಲಾಗಿದೆ ಮತ್ತು ಅದರ ತಂಡಗಳನ್ನು ಎಲ್ಲಾ ಅಂತರಾಷ್ಟ್ರೀಯ ಫುಟ್‌ ಬಾಲ್ ಸ್ಪರ್ಧೆಗಳಿಂದ ಅಮಾನತುಗೊಳಿಸಲಾಗಿದೆ ಎಂದು ಫಿಫಾ ಸೋಮವಾರ ಯುಇಎಫ್ ಎ ನೊಂದಿಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

ಈ ವರ್ಷದ ಕೊನೆಯಲ್ಲಿ ಕತಾರ್‌ ನಲ್ಲಿ ನಡೆಯಲಿರುವ ವಿಶ್ವಕಪ್‌ ಗಾಗಿ ಪುರುಷರ ತಂಡವು ಮಾರ್ಚ್‌ ನಲ್ಲಿ ಅರ್ಹತಾ ಪ್ಲೇ-ಆಫ್‌ ಗಳಲ್ಲಿ ಆಡಬೇಕಿತ್ತು ಹಾಗೂ ಮಹಿಳಾ ತಂಡವು ಜುಲೈನಲ್ಲಿ ಇಂಗ್ಲೆಂಡ್‌ ನಲ್ಲಿ ನಡೆಯಲಿರುವ ಯುರೋಪಿಯನ್ ಚಾಂಪಿಯನ್‌ ಶಿಪ್‌ ಗೆ ಅರ್ಹತೆ ಗಳಿಸಿತ್ತು.

ಈ ಪ್ರಕಟಣೆಯು ಯುರೋಪಿಯನ್ ಸ್ಪರ್ಧೆಗಳಲ್ಲಿ ಭಾಗವಹಿಸುವ ರಷ್ಯಾದ ಕ್ಲಬ್‌ ಗಳ ಮೇಲೂ ಪರಿಣಾಮ ಬೀರುತ್ತದೆ.

“ಫಿಫಾ ಮತ್ತು ಯುಇಎಫ್ ಎ ಇಂದು ಒಟ್ಟಾಗಿ ನಿರ್ಧರಿಸಿದೆ, ರಷ್ಯಾದ ಎಲ್ಲಾ ತಂಡಗಳು, ರಾಷ್ಟ್ರೀಯ ಪ್ರತಿನಿಧಿ ತಂಡಗಳು ಅಥವಾ ಕ್ಲಬ್ ತಂಡಗಳು, ಮುಂದಿನ ಸೂಚನೆ ಬರುವವರೆಗೂ ಫಿಫಾ ಮತ್ತು ಯುಇಎಫ್ ಎ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಲಾಗಿದೆ” ಎಂದು ಫುಟ್‌ ಬಾಲ್‌ ನ ಜಾಗತಿಕ ಮತ್ತು ಯುರೋಪಿಯನ್ ಆಡಳಿತ ಮಂಡಳಿಗಳು ತಿಳಿಸಿವೆ.

Join Whatsapp
Exit mobile version