Home Uncategorized ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನಾಮಫಲಕ ಮರು ಸ್ಥಾಪನೆ

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನಾಮಫಲಕ ಮರು ಸ್ಥಾಪನೆ

ಮಡಿಕೇರಿ: ನಗರದಲ್ಲಿ ನಾಪತ್ತೆಯಾಗಿದ್ದ “ಫೀ.ಮಾ.ಕೆ.ಎಂ.ಕಾರ್ಯಪ್ಪ” ನಾಮಫಲಕವನ್ನು ಮರು ಸ್ಥಾಪಿಸಲಾಗಿದೆ.


ಸ್ಥಳಕ್ಕೆ ಭೇಟಿ ನೀಡಿದ್ದ ದೂರುದಾರರಾದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಹಾಗೂ ಕೊಡಗು ಪೀಪಲ್ಸ್ ಫೋರಂ ನ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಫಲಕಕ್ಕೆ ಹೂವಿನ ಮಾಲೆ ಹಾಕಿ ಹರ್ಷ ವ್ಯಕ್ತಪಡಿಸಿದರು.
ಫೀ.ಮಾ.ಕಾರ್ಯಪ್ಪ ಅವರ ಜನ್ಮದಿನದ ಹಿನ್ನೆಲೆ ಪ್ರತಿಮೆಗೂ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಶಿವಕುಮಾರ್ ನಾಣಯ್ಯ ನಾಮಫಲಕ ನಾಪತ್ತೆಯಾಗಿದ್ದ ಪ್ರಕರಣದ ಕುರಿತು ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆಯಲಾಗಿತ್ತು. ಇದೀಗ ನೂತನ ನಾಮಫಲಕವನ್ನು ಅಳವಡಿಸಲಾಗಿದ್ದು, ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.

Join Whatsapp
Exit mobile version