18 ಅಡಿ ಉದ್ದದ ಕಿಂಗ್‌ ಕೋಬ್ರಾವನ್ನು ರಕ್ಷಣೆ ಮಾಡಿದ ಮಹಿಳಾ ಅರಣ್ಯಾಧಿಕಾರಿ

- Advertisement -

ಕೇರಳ: ಕೇರಳದ ಮಹಿಳಾ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿದ್ದಾರೆ. ಕೇರಳದಲ್ಲಿ ಅರಣ್ಯ ಬೀಟ್ ಅಧಿಕಾರಿಯೊಬ್ಬರು ದೈತ್ಯ ಕಾಳಿಂಗ ಸರ್ಪವನ್ನು ರಕ್ಷಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

- Advertisement -

ಈ ವಿಡಿಯೋವನ್ನು ರಾಜನ್ ಮೇಧೇಕರ್ ತಮ್ಮ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇರಳದ ಪರುತಿಪಲ್ಲಿ ವಲಯದಲ್ಲಿ ಈ ಕಾರ್ಯಾಚರಣೆಯನ್ನು ಅರಣ್ಯ ಬೀಟ್ ಅಧಿಕಾರಿ ಜಿಎಸ್ ರೋಶ್ನಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪರುತಿಪಲ್ಲಿಯ ಹೊಳೆಯ ಒಂದು ಬದಿಯಲ್ಲಿ ಸಿಲುಕಿಕೊಂಡಿದ್ದ ದೈತ್ಯ ಕಾಳಿಂಗವನ್ನು ಕೋಲು ಬಳಸಿ, ರಕ್ಷಣೆ ಮಾಡಿದ್ದಾರೆ.

18 ಅಡಿ ಉದ್ದದ ಕಿಂಗ್‌ ಕೋಬ್ರಾವನ್ನು ಕೇರಳದ ಪರುತಿಪಲ್ಲಿ ರೇಂಜ್‌ನ ಫಾರೆಸ್ಟ್ ಬೀಟ್ ಆಫೀಸರ್ ರೋಶ್ನಿ ನೋಡಿ, ರಕ್ಷಣೆ ಮಾಡಿದ್ದಾರೆ. ಈ ಕಿಂಗ್‌ ಕೋಬ್ರಾ ಕೇರಳದ ತಿರುವನಂತಪುರದ ಪೆಪ್ಪರಾದ ಅಂಚುಮರುತುಮೂಟ್‌ನ ವಸತಿ ಪ್ರದೇಶದಿಂದ ಕಂಡು ಬಂದಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ರಾಜನ್ ಮೇಧೇಕರ್ ಬರೆದುಕೊಂಡಿದ್ದಾರೆ.

- Advertisement -

ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಸರೀಸೃಪಗಳಲ್ಲಿ ಕಾಳಿಂಗ ಸರ್ಪ ಒಂದು, ಆದರೆ ಇದನ್ನು ಹಿಡಿಯುವುದು ಅಷ್ಟೊಂದು ಸುಲಭವಲ್ಲ, ಆದರೆ ಮಹಿಳಾ ಅಧಿಕಾರಿ ರೋಶ್ನಿ ಅವರು ಇದಕ್ಕೆ ಯಾವುದೇ ತೊಂದರೆ ಆಗದಂತೆ ಅದನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಇನ್ನು ಕಾರ್ಯಚರಣೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವೀಡಿಯೊ 54,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

- Advertisement -


Must Read

Related Articles