ಹೊಸದಿಲ್ಲಿ: ಚೀನಾ ಮತ್ತು ಯುಎಸ್‌ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆ ಕೇಂದ್ರ ಸರ್ಕಾರ ಐದು ರಾಜ್ಯಗಳಿಗೆ ಕೋವಿಡ್ ಸಂಖ್ಯೆ ಹೆಚ್ಚಾಗದಂತೆ ನಿಗಾ ಇರಿಸಲು ಸೂಚಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, “ಭಾರತದ ದೈನಂದಿನ ಹೊಸ ಕೋವಿಡ್ ಪ್ರಕರಣಗಳನ್ನ ಗಮನಿಸಿದಾಗ ಕೆಲವು ರಾಜ್ಯಗಳು ಕೋವಿಡ್ ಸೋಂಕಿತರ ಹೆಚ್ಚಳವನ್ನು ವರದಿ ಮಾಡುತ್ತಿವೆ” ಎಂದು ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
“ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಪುನಃ ತೆರೆಯಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕೋವಿಡ್ 19 ನಿರ್ವಹಣೆಗಾಗಿ ಅಪಾಯದ ಮೌಲ್ಯಮಾಪನ ಆಧಾರಿತ ವಿಧಾನವನ್ನು ನಿರಂತರವಾಗಿ ಅನುಸರಿಸುವ ಅವಶ್ಯಕತೆಯಿದೆ” ಎಂದು ಬರೆದಿದ್ದಾರೆ.
ಕೇರಳ, ಮಿಜೋರಾಂ, ಮಹಾರಾಷ್ಟ್ರ, ದೆಹಲಿ ಮತ್ತು ಹರಿಯಾಣ ರಾಜ್ಯ ಸರ್ಕಾರಗಳಿಗೆ ಪತ್ರ ಕಳುಹಿಸಲಾಗಿದೆ.
ಪರೀಕ್ಷೆ, ಟ್ರ್ಯಾಕಿಂಗ್, ಚಿಕಿತ್ಸೆ, ವ್ಯಾಕ್ಸಿನೇಷನ್ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದನ್ನು ಒಳಗೊಂಡಿರುವ ಐದು ಪಟ್ಟು ಕಾರ್ಯತಂತ್ರವನ್ನು ಮುಂದುವರಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.