Home ಟಾಪ್ ಸುದ್ದಿಗಳು ಫಾಝಿಲ್ ಹತ್ಯೆ ಪ್ರಕರಣ: ಏಳನೇ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಫಾಝಿಲ್ ಹತ್ಯೆ ಪ್ರಕರಣ: ಏಳನೇ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಮಂಗಳೂರು: ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಏಳನೇ ಆರೋಪಿಯ ಜಾಮೀನು ಅರ್ಜಿಯನ್ನು ಮಂಗಳೂರು ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರಾಕರಿಸಿದೆ.

ಜುಲೈ 28ರಂದು ರಾತ್ರಿ ಸುರತ್ಕಲ್ ಮಂಗಳಪೇಟೆ ನಿವಾಸಿ ಫಾಝಿಲ್ ರನ್ನು ದುಷ್ಕರ್ಮಿಗಳು ತಲ್ವಾರ್ ಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಪ್ರಕರಣ ಸಂಬಂಧ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ 7 ಮಂದಿ ಹಾಗೂ ಕೃತ್ಯ ನಡೆಸಲು ಕಾರು ನೀಡಿದ್ದ ಓರ್ವ ಸೇರಿ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಫಾಝಿಲ್ ಹತ್ಯೆಯಲ್ಲಿ ಕಾರು ಚಾಲಕನಾಗಿದ್ದ ಏಳನೇ ಆರೋಪಿ ಅಜಿತ್ ಕ್ರಾಸ್ತಾ ಎಂಬಾತನು ಜಾಮೀನು ಕೋರಿ ಮಂಗಳೂರು ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದು ನ್ಯಾಯಾಲಯ ಅದನ್ನು ತಿರಸ್ಕರಿಸಿದೆ.

Join Whatsapp
Exit mobile version