Home ಟಾಪ್ ಸುದ್ದಿಗಳು ABVP ಕಾರ್ಯಕರ್ತರನ್ನು ಏಕಾಂಗಿಯಾಗಿ ಎದುರಿಸಿದ ವಿದ್ಯಾರ್ಥಿನಿಗೆ ‘ಫಾತಿಮಾ ಶೇಖ್‌ ಪ್ರಶಸ್ತಿ’

ABVP ಕಾರ್ಯಕರ್ತರನ್ನು ಏಕಾಂಗಿಯಾಗಿ ಎದುರಿಸಿದ ವಿದ್ಯಾರ್ಥಿನಿಗೆ ‘ಫಾತಿಮಾ ಶೇಖ್‌ ಪ್ರಶಸ್ತಿ’

ಚೆನ್ನೈ: ತನ್ನ ವಿರುದ್ಧ ಘೋಷಣೆಗಳನ್ನು ಕೂಗಿದ ABVP ಕಾರ್ಯಕರ್ತರನ್ನು ಎದುರಿಸಿ, ಧೈರ್ಯ ಪ್ರದರ್ಶಿಸಿರುವ ಕರ್ನಾಟಕದ ಮಂಡ್ಯದ ವಿದ್ಯಾರ್ಥಿನಿ  ಬೀಬಿ ಮುಸ್ಕಾನ್‌ ಖಾನ್‌ ಗೆ ‘ಫಾತಿಮಾ ಶೇಖ್‌ ಪ್ರಶಸ್ತಿ’ ನೀಡುವುದಾಗಿ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ (ಟಿಎಂಎಂಕೆ) ಬುಧವಾರ ಘೋಷಿಸಿದೆ.

ಕಾಲೇಜ್ ಗೆ  ಅಸೈನ್ಮೆಂಟ್ ಕೊಡಲು ತೆರಳಿದ್ದ ವೇಳೆ ಕೆಲವರು ಬುರ್ಕಾ ತೆಗೆದು ಹೋಗುವಂತೆ ಚುಡಾಯಿಸಿದ್ದಾರೆ. ಗುಂಪು ಕಟ್ಟಿಕೊಂಡು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವತಿ ಅಲ್ಲಾಹು ಅಕ್ಬರ್ ಎಂದು ಕೂಗಿದ್ದರು. ಇದರ ಬೆನ್ನಲ್ಲೇ ಯುವತಿ ಧೈರ್ಯಕ್ಕೆ ಮೆಚ್ಚಿ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ(ಟಿಎಂಎಂಕೆ) ಫಾತಿಮಾ ಶೇಖ್ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ.

Join Whatsapp
Exit mobile version