Home ಟಾಪ್ ಸುದ್ದಿಗಳು ಬಸ್ – ಟ್ರಕ್ ನಡುವೆ ಭೀಕರ ಅಪಘಾತ; 6 ಮಂದಿ ಸಾವು, 21 ಮಂದಿಗೆ ಗಾಯ

ಬಸ್ – ಟ್ರಕ್ ನಡುವೆ ಭೀಕರ ಅಪಘಾತ; 6 ಮಂದಿ ಸಾವು, 21 ಮಂದಿಗೆ ಗಾಯ

ಲಕ್ನೋ: ಬಸ್ – ಟ್ರಕ್ ನಡುವಿನ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 21 ಜನರು ಗಾಯಗೊಂಡಿರುವ ಘಟನೆ ಫಿರೋಜಾಬಾದ್’ನಲ್ಲಿ ಬುಧವಾರ ನಡೆದಿದೆ.


ಲುಧಿಯಾನ ಮತ್ತು ರಾಯ್ ಬರೇಲಿಯಯಿಂದ 50 ಪ್ರಯಾಣಿಕರನ್ನು ಹೊತ್ತುಕೊಂಡು ಬರುತ್ತಿದ್ದ ಬಸ್ಸಿಗೆ ಆಗ್ರಾ-ಲಕ್ನೋ ದಾರಿಯಲ್ಲಿ ಟ್ರಕ್ ಡಿಕ್ಕಿ ಹೊಡೆದಿದೆ.


ಚಾಲಕ ಬಸ್ ಚಲಾಯಿಸುವಾಗ ತೂಕಡಿಸುತ್ತಿದ್ದು, ಹಿಂದಿನಿಂದ ಬಂದ ಟ್ರಕ್ ಬಸ್ ಗೆ ಢಿಕ್ಕಿಯಾಗಿದ್ದರಿಂದ ಬಸ್ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.


ಘಟನಾ ಸ್ಥಳದಿಂದ ಬಸ್ಸನ್ನು ತೆರವುಗೊಳಿಸಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp
Exit mobile version