Home ಟಾಪ್ ಸುದ್ದಿಗಳು ಬಿಜೆಪಿ ನಾಯಕರ ಭೇಟಿ ಬೆನ್ನಲ್ಲೇ ಯೂಟರ್ನ್ ತೆಗೆದುಕೊಂಡ ಅಣ್ಣಾ ಹಜಾರೆ | ಉಪವಾಸ ಮುಷ್ಕರ ಇಲ್ಲ

ಬಿಜೆಪಿ ನಾಯಕರ ಭೇಟಿ ಬೆನ್ನಲ್ಲೇ ಯೂಟರ್ನ್ ತೆಗೆದುಕೊಂಡ ಅಣ್ಣಾ ಹಜಾರೆ | ಉಪವಾಸ ಮುಷ್ಕರ ಇಲ್ಲ

ಮುಂಬೈ : ರೈತ ಹೋರಾಟವನ್ನು ಬೆಂಬಲಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಮಾಡುವುದಾಗಿ ಘೋಷಿಸಿದ್ದ ಅಣ್ಣಾ ಹಜಾರೆ, ಬಿಜೆಪಿ ನಾಯಕರು ಭೇಟಿಯಾಗುತ್ತಿದ್ದಂತೆ ಯೂಟರ್ನ್ ತೆಗೆದುಕೊಂಡಿದ್ದಾರೆ.

ಬಿಜೆಪಿ ಹಿರಿಯ ಮುಖಂಡ, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡಣವಿಸ್ ಹಾಗೂ ಕೃಷಿ ಸಚಿವಾಲಯದ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರ ಭೇಟಿಯಾದ ಬಳಿಕ, ಅವರ ಸಮ್ಮುಖದಲ್ಲೇ ಉಪವಾಸ ಕೈಬಿಟ್ಟಿರುವ ಬಗ್ಗೆ ಹಜಾರೆ ಪ್ರಕಟಿಸಿದ್ದಾರೆ.

ನಮ್ಮ ಕೆಲವು ಬೇಡಿಕೆಗಳಿಗೆ ಕೇಂದ್ರ ಸರಕಾರ ಸಮ್ಮತಿ ಸೂಚಿಸಿದೆ. ರೈತರ ಜೀವನವನ್ನು ಸುಧಾರಿಸಲು ಸಮಿತಿ ರಚಿಸುವುದಾಗಿ ತಿಳಿಸಿದೆ. ಹೀಗಾಗಿ ಶನಿವಾರದ ಉಪವಾಸ ಮುಷ್ಕರ ರದ್ದುಗೊಳಿಸಿದ್ದೇನೆ ಎಂದು ಹಜಾರೆ ತಿಳಿಸಿದ್ದಾರೆ.

ಈ ಹಿಂದೆ ಯುಪಿಎ ಸರಕಾರವಿದ್ದಾಗ ಲೋಕಪಾಲ್ ಕಾಯ್ದೆ ಜಾರಿಗಾಗಿ ಬಾರೀ ಗದ್ದಲದ ಹೋರಾಟ ಹೋರಾಟ ನಡೆಸಿ, ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲು ಅನುಕೂಲ ಮಾಡಿಕೊಟ್ಟಿದ್ದ ಹಜಾರೆ ಇಂದಿನ ನಡೆ ಅನುಮಾನಾಸ್ಪದವಾಗಿದೆ. ರೈತರ ಹೋರಾಟ ಮುಗಿಲು ಮುಟ್ಟಿರುವ ಈ ಹಂತದಲ್ಲಿ, ಹೋರಾಟ ಮಾಡುವುದಾಗಿ ಘೋಷಿಸಿ, ಬಿಜೆಪಿ ನಾಯಕರ ಭೇಟಿ ಬೆನ್ನಲ್ಲೇ ಹೋರಾಟ ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Join Whatsapp
Exit mobile version