Home ಟಾಪ್ ಸುದ್ದಿಗಳು ರೈತರ ಮೇಲೆ ಲಘು ಲಾಠಿ ಪ್ರಹಾರ; ಬ್ಯಾರಿಕೇಡ್ ಗಳನ್ನು ಕಿತ್ತೆಸೆಯುತ್ತಿರುವ ಅನ್ನದಾತರು

ರೈತರ ಮೇಲೆ ಲಘು ಲಾಠಿ ಪ್ರಹಾರ; ಬ್ಯಾರಿಕೇಡ್ ಗಳನ್ನು ಕಿತ್ತೆಸೆಯುತ್ತಿರುವ ಅನ್ನದಾತರು

ನವದೆಹಲಿ : ಕೇಂದ್ರ ಸರಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ದೆಹಲಿ-ಉತ್ತರ ಪ್ರದೇಶ ಗಡಿ ಘಾಝಿಪುರದಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಾಳಿದೆ.

ರೈತರು ಗಡಿ ಪ್ರದೇಶದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ರೈತರು ನುಗ್ಗಿದ್ದಾರೆ. ರಸ್ತೆಯಲ್ಲಿ ಅಡ್ಡಹಾಕಲಾಗಿದ್ದ ಕಾಂಕ್ರೀಟ್ ತಡೆಗಳನ್ನು ಎತ್ತಿಹಾಕಲಾಗಿದೆ. ರಸ್ತೆಗೆ ತಡೆಯಾಗಿ ನಿಲ್ಲಿಸಲಾಗಿದ್ದ ಬಸ್ ಗಳಿಗೆ ಹಾನಿ ಮಾಡಿ, ರೈತರು ಮುನ್ನುಗ್ಗಿದ್ದಾರೆ.

ಕೆಲವೆಡೆ ರೈತರ ಮೇಲೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿದ್ದಾರೆ ಮತ್ತು ಕೆಲವೆಡೆ ಅಶ್ರುವಾಯು ಸಿಡಿಸಿದ್ದಾರೆ.

ರೈತರು ಟ್ರಾಕ್ಟರ್ ಗಳಲ್ಲಿ ಮುನ್ನುಗ್ಗಿದ್ದಾರೆ. ಟ್ರಾಕ್ಟರ್ ಗಳಲ್ಲಿ ಮಹಿಳಾ ಪ್ರತಿಭಟನಕಾರರು ಮುಂದೆ ನಿಂತು ಪ್ರತಿಭಟನೆ ಮುನ್ನಡೆಸುತ್ತಿದ್ದಾರೆ.

ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆದಿದೆ, ನೂಕಾಟ ತಳ್ಳಾಟ ನಡೆದಿದೆ.  

https://twitter.com/NBTDilli/status/1353932666584752128?ref_src=twsrc%5Etfw
Join Whatsapp
Exit mobile version