Home ಟಾಪ್ ಸುದ್ದಿಗಳು ರೈತ ಹೋರಾಟಕ್ಕೆ ಬೆಂಬಲ| 1,200 ಟ್ವಿಟ್ಟರ್ ಖಾತೆಗಳ ಅಮಾನತಿಗೆ ಕೇಂದ್ರ ಆದೇಶ

ರೈತ ಹೋರಾಟಕ್ಕೆ ಬೆಂಬಲ| 1,200 ಟ್ವಿಟ್ಟರ್ ಖಾತೆಗಳ ಅಮಾನತಿಗೆ ಕೇಂದ್ರ ಆದೇಶ

ಹೊಸದಿಲ್ಲಿ : ಖಲಿಸ್ತಾನ್ ಮತ್ತು ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿ 1,200 ಟ್ವಿಟ್ಟರ್ ಖಾತೆಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರಕಾರವು ಟ್ವಿಟ್ಟರ್ ಗೆ ಮತ್ತೊಂದು ನೋಟಿಸ್ ನೀಡಿದೆ. ಖಲಿಸ್ತಾನ್ ಮತ್ತು ಪಾಕಿಸ್ತಾನ  ಪರವಾಗಿದೆ ಎಂದು ಭದ್ರತಾ ಸಂಸ್ಥೆಗಳು ವರದಿ ಮಾಡಿದ್ದ ಈ ಖಾತೆಗಳು ರೈತರ ಹೋರಾಟದ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಡಿ ಪ್ರಚೋದಿಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಖಾತೆಗಳನ್ನು ಸ್ಥಗಿತಗೊಳಿಸಲು ಟ್ವಿಟ್ಟರ್ ಗೆ ಕಳುಹಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಟ್ವಿಟ್ಟರ್ ಇನ್ನೂ ನಿರ್ದೇಶನವನ್ನು ಪಾಲಿಸಿಲ್ಲ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರೈತರ ಹೋರಾಟವನ್ನು ಬೆಂಬಲಿಸಿ ಜಾಗತಿಕ ಸೆಲೆಬ್ರಿಟಿಗಳು ಪೋಸ್ಟ್ ಮಾಡಿದ್ದ ಕೆಲವು ಟ್ವೀಟ್‌ಗಳನ್ನು ಟ್ವಿಟ್ಟರ್ ನ ಜಾಗತಿಕ ಸಿಇಒ ಜ್ಯಾಕ್ ಡೋರ್ಸಿ ಲೈಕ್ ಮಾಡಿದ್ದೂ ತಮ್ಮ ಗಮನಕ್ಕೆ ಬಂದಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಈ ಹಿಂದೆ ಸ್ಥಗಿತಗೊಳಿಸಬೇಕಾದ 257 ಖಾತೆಗಳ ಪಟ್ಟಿಯನ್ನು ಕೇಂದ್ರವು ಜನವರಿ 31 ರಂದು ಟ್ವಿಟ್ಟರ್ ಗೆ ನೀಡಿತ್ತು. ಆ ಸಮಯದಲ್ಲಿ ಸರಕಾರ ನೀಡಿದ ಕಾರಣ ದಾಳಿಯನ್ನು ಪ್ರಚೋದಿಸುವ ಟ್ವೀಟ್‌ಗಳನ್ನು ಈ ಖಾತೆಗಳು ನಿರಂತರವಾಗಿ ಹಂಚುತ್ತಿದೆ ಎಂದಾಗಿತ್ತು. ಅವುಗಳಲ್ಲಿ ಕೆಲವು ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೂ ಶೀಘ್ರದಲ್ಲೇ ಅಮಾನತನ್ನು ಹಿಂಪಡೆಯಲಾಗಿತ್ತು.

Join Whatsapp
Exit mobile version