Home ಟಾಪ್ ಸುದ್ದಿಗಳು ಎರಡನೇ ದಿನಕ್ಕೆ ಕಾಲಿಟ್ಟ ದೆಹಲಿ ಚಲೋ | ಹರ್ಯಾಣ ಗಡಿಯಲ್ಲಿ ಮತ್ತೆ ರೈತರ ಮೇಲೆ ಅಶ್ರುವಾಯ...

ಎರಡನೇ ದಿನಕ್ಕೆ ಕಾಲಿಟ್ಟ ದೆಹಲಿ ಚಲೋ | ಹರ್ಯಾಣ ಗಡಿಯಲ್ಲಿ ಮತ್ತೆ ರೈತರ ಮೇಲೆ ಅಶ್ರುವಾಯ ಪ್ರಯೋಗ; ಉತ್ತರ ಭಾರತ ಉದ್ವಿಗ್ನ

ರೋಹ್ಟಕ್ : ಕೇಂದ್ರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ದೇಶಾದ್ಯಂತ ರೈತರು ಬೀದಿಗಿಳಿದಿದ್ದು, ‘ದೆಹಲಿ ಚಲೋ’ ಪಾದಯಾತ್ರೆ ಮತ್ತು ವಾಹನಜಾಥಾ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮುಂಜಾನೆಯೇ ರೋಹ್ಟಕ್ ಮತ್ತು ಜ್ಹಜ್ಜರ್ ಗಡಿಯಲ್ಲಿ ಸಾವಿರಾರು ರೈತರು ಜಮಾಯಿಸಿದ್ದು, ರೈತರನ್ನು ಹಿಮ್ಮೆಟ್ಟಿಸಲು ಪೊಲೀಸರು ಮತ್ತೆ ಅಶ್ರುವಾಯು ಸಿಡಿಸಿದ್ದಾರೆ.

ರೈತರು ದೆಹಲಿ ಪ್ರವೇಶಿಸದಂತೆ ಹರ್ಯಾಣ-ದೆಹಲಿ ಗಡಿಭಾಗದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ದೆಹಲಿಯತ್ತ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ.

ಈ ನಡುವೆ ಪ್ರತಿಭಟನಕಾರರಲ್ಲಿ ಓರ್ವ ರೈತ ಅಪಘಾತವೊಂದರಲ್ಲಿ ಮೃತಪಟ್ಟಿದ್ದು, ರೈತರ ಆಕ್ರೋಶ ಮುಗಿಲು ಮುಟ್ಟಿದೆ. ದೆಹಲಿಗೆ ತಲುಪುವ ಎರಡು ದಿನಗಳ ಪಾದಯಾತ್ರೆ ಮತ್ತು ವಾಹನ ಜಾಥಾವನ್ನು ರೈತರು ಉತ್ತರ ಭಾರತದ ಪ್ರಮುಖ ರಾಜ್ಯಗಳಿಂದ ಹೊರಟಿದ್ದರು. ಈಗಾಗಲೇ ಸಾವಿರಾರು ರೈತರು ದೆಹಲಿಯತ್ತ ಮುಖಮಾಡಿದ್ದಾರೆ. ನಿನ್ನೆ ಕೂಡ ಕೆಲವೆಡೆ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಸಿಡಿಸಿ ರೈತರನ್ನು ತಡೆಯುವ ಯತ್ನ ಮಾಡಲಾಗಿತ್ತು.  

Join Whatsapp
Exit mobile version