Home ಟಾಪ್ ಸುದ್ದಿಗಳು ನವದೆಹಲಿ| ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್. ಸಿ ಕೊಹ್ಲಿ ನಿಧನ

ನವದೆಹಲಿ| ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್. ಸಿ ಕೊಹ್ಲಿ ನಿಧನ

ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಫಕೀರ್ ಚಂದ್ ಕೊಹ್ಲಿ(96) ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಇವರು ಭಾರತದ ಅತಿ ದೊಡ್ಡ ಸಾಫ್ಟ್ ವೇರ್ ಕನ್ಸಲ್ಟೆನ್ಸಿ ಆದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್(ಟಿಸಿಎಸ್) ಸಂಸ್ಥಾಪಕ ಹಾಗೂ ಮೊದಲ ಸಿಇಓ ಆಗಿದ್ದರು.

1924ರ ಮಾರ್ಚ್ 19ರಂದು ಬ್ರಿಟೀಷ್ ಆಡಳಿತದ ಪೇಶಾವರ್ ನಲ್ಲಿ ಜನಿಸಿದ ಇವರು, ಹುಟ್ಟೂರಿನಲ್ಲಿಯೇ ಶಾಲಾ ಶಿಕ್ಷಣವನ್ನು ಮಾಡಿ ಮುಗಿಸಿದ್ದಾರೆ. ಅವರು, ಲಾಹೋರ್‌ನ ಪಂಜಾಬ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಬಿಎಸ್ಸಿ ಪದವಿ ಪಡೆದ ನಂತರ 1948ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ನಲ್ಲಿ ಪದವೀಧರಾದರು.

ಕೆನಡಿಯನ್ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿ, ನಂತರ 1950ರಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ನಲ್ಲಿ ಎಂಎಸ್ ಮಾಡಿದರು. 1951ರಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪನಿ ಸೇರಿಕೊಂಡರು.

Join Whatsapp
Exit mobile version