ಫರಂಗಿಪೇಟೆ | ದಿಗಂತ್ ಮನೆಗೆ ಸ್ಪೀಕರ್ ಯುಟಿ ಖಾದರ್ ಭೇಟಿ

- Advertisement -


ಫರಂಗಿಪೇಟೆ: ನಾಪತ್ತೆಯಾದ ದಿಗಂತ್ ಮನೆಗೆ ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಧೈರ್ಯ ಮತ್ತು ಸಾಂತ್ವಾನ ತಿಳಿಸಿದ್ದಾರೆ.

- Advertisement -


ಇಂದು ಫರಂಗಿಪೇಟೆ ಕಿದೆಬೆಟ್ಟು ಮನೆಗೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಾವು ಎಷ್ಟೇ ಸಾಂತ್ವಾನ ಹೇಳಿದರು, ಮನೆ ಮಗನ ನಾಪತ್ತೆಯಿಂದ ಕುಟುಂಬಕ್ಕೆ ಸಮಾಧಾನವಾಗಲು ಸಾಧ್ಯವಿಲ್ಲ. ಆದರೂ ನೋವಿನಲ್ಲಿರುವ ಕುಟುಂಬದೊಂದಿಗೆ ನಾವೆಲ್ಲರೂ ಸಹಭಾಗಿಗಳಾಗುತ್ತೇವೆ. ಆತ ಜೀವಂತವಾಗಿ ಬದುಕಿ ಬರಬೇಕು ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ. ವಿಧಾನ ಸೌಧದಲ್ಲಿ ಪುಸ್ತಕ ಮೇಳ, ಕಲಾಪ ಇದ್ದಿದ್ದರಿಂದ ಬರಲು ಸಾಧ್ಯವಾಗಿಲ್ಲ. ಪ್ರಕರಣವನ್ನು ಇನ್ನಷ್ಟು ಆಯಾಮಗಳಿಂದ ತನಿಖೆ ನಡೆಸಲು ಗೃಹ ಸಚಿವರೊಂದಿಗೆ ಮಾತನಾಡುತ್ತೇನೆ. ಈ ನಾಪತ್ತೆ ಪ್ರಕರಣ ಸಮಸ್ಯೆಯನ್ನು ಬಗೆಹರಿಸಲು ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಾರದು ಎಂದು ಹೇಳಿದರು.

- Advertisement -

ಈ ವೇಳೆ ಎಸ್.ಪಿ.ಯತೀಶ್ ಎನ್, ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಮ್ಲಾನ್ ಮಾರಿಪಳ್ಳ, ಕೆ.ಕೆ.ಪೂಂಜಾ ಸೇವಾಂಜಲಿ ಟ್ರಸ್ಟ್, ಉಮೇಶ್ ಬರ್ಕೆ, ಬದ್ರಿಯಾ ಜುಮ್ಮಾ ಮಸೀದಿ ಅಮೆಮ್ಮಾರ್ ಅಧ್ಯಕ್ಷ ಅಬುಸಾಲಿ, ಅರಫಾ ಜುಮ್ಮಾ ಮಸೀದಿ ಕುಂಪನಮಜಲು ಅಧ್ಯಕ್ಷ ಬುಕಾರಿ, ಪ್ರಕಾಶ್ ಶೆಟ್ಟಿ ದೇವಸ್ಯ, ಪಂಚಾಯತ್ ಸದಸ್ಯ ಎಸ್ ರಜಾಕ್ ಅಮೆಮ್ಮಾರ್, ನಬಿಷಾ, ರುಕ್ಷಾನಾ, ಸಾರಾ ಅಮೆಮ್ಮಾರ್, ಎಫ್.ಎ.ಖಾದರ್, ಅರ್ಜುನ್ ಪುಂಜ ಉಪಸ್ಥಿತರಿದ್ದರು.

- Advertisement -


Must Read

Related Articles