ಬೆಂಗಳೂರು: ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಲಾಗಿದ್ದ ಅವಧಿಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸೆಪ್ಟೆಂಬರ್ 14ವರೆಗೂ ವಿಸ್ತರಣೆ ಮಾಡಿದೆ.
ಇದರಿಂದ ಯಜಮಾನರ ಸ್ಥಾನದಲ್ಲಿ ಮಹಿಳೆಯರು ಹೆಸರಿಲ್ಲದ ಕಾರಣ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕದ ಮಹಿಳೆಯರಿಗೆ ಸದ್ಯ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಟ್ವೀಟ್ ಮಾಡಿದ್ದು, ಪಡಿತರ ಚೀಟಿಯಲ್ಲಿ ತಿದ್ದುಪಡಿ/ಸೇರ್ಪಡೆಗೆ ಅವಧಿಯನ್ನು ವಿಸ್ತರಿಸಲಾಗಿದ್ದು, ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳದವರು ಸೆಪ್ಟೆಂಬರ್ 09 ರಿಂದ 14 ರೊಳಗೆ ಯಜಮಾನಿಯ ಸ್ಥಾನದಲ್ಲಿ ತಿದ್ದುಪಡಿ ಮಾಡಿಕೊಂಡು, ಯೋಜನೆಗೆ ನೋಂದಾಯಿಸಿ ಸೌಲಭ್ಯ ಪಡೆಯಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.