ದೋಹಾ: ಕತಾರ್‌ನಲ್ಲಿ ಅಮೆರಿಕನ್ ಮಿಲಿಟರಿ ನೆಲೆ ವಿಸ್ತರಿಸಲಾಗಿದ್ದು, ಅಲ್ ಉದೈದ್ ವಾಯುನೆಲೆಯಲ್ಲಿ ನಿರ್ಮಿಸಲಾದ ಹೊಸ ಕಟ್ಟಡಗಳು ಲೋಕಾರ್ಪಣೆಗೊಂಡಿದೆ.
ಅಮೀರಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ನ ಕಮಾಂಡರ್ ಮೇಜರ್ ಜನರಲ್ ಈಸಾ ಅಲಿ ಅಲ್ ಕುಬೈಸಿ ಸೈನಿಕರಿಗಾಗಿ ಸಿದ್ಧಪಡಿಸಿದ ವಸತಿ ನಿಲಯಗಳನ್ನು ಉದ್ಘಾಟಿಸಿದರು. ಕಾರ್ಯಕ್ರಮದ ನಂತರ ಮಾತನಾಡಿದ ಅಲ್ ಕುಬೈಸಿ, ಅಮಿರಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಮೇಲ್ವಿಚಾರಣೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿರುವ ಎರಡು ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.