Home ರಾಷ್ಟ್ರೀಯ ಎಕ್ಸಿಟ್ ಪೋಲ್ ಗಳು ಚುನಾವಣಾ ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಸೃಷ್ಟಿಸುತ್ತವೆ: ಚುನಾವಣಾ ಆಯುಕ್ತ

ಎಕ್ಸಿಟ್ ಪೋಲ್ ಗಳು ಚುನಾವಣಾ ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಸೃಷ್ಟಿಸುತ್ತವೆ: ಚುನಾವಣಾ ಆಯುಕ್ತ

ನವದೆಹಲಿ: ಚುನಾವಣಾ ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳು ನೀಡುವ ಎಕ್ಸಿಟ್ ಪೋಲ್ ಗಳು ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಸೃಷ್ಟಿಸುತ್ತವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.


ಮೊದಲು ನೀವು ಚುನಾವಣಾ ಫಲಿತಾಂಶದ ಬಗ್ಗೆ ಎಲ್ಲಿ ಸಮೀಕ್ಷೆ ನಡೆಸಿದ್ದೀರ, ಎರಡನೆಯದಾಗಿ ಮತ ಎಣಿಕೆ ದಿನ ಚುನಾವಣಾ ಆಯೋಗ ಮಾಹಿತಿ ನೀಡುವ ಮುನ್ನವೇ ಮತ ಎಣಿಕೆ ಆರಂಭವಾಗಿ ಕೇವಲ 20 ನಿಮಿಷಗಳಲ್ಲಿ ಹಿನ್ನೆಡೆ, ಮುನ್ನಡೆ ನೀಡುವುದು ಜತೆಗೆ ಮೊದಲೇ ರೌಂಡ್ ಮುಕ್ತಾಯದ ಬಗ್ಗೆ ಮಾಹಿತಿ ನೀಡುವುದು ತಪ್ಪು.


ಒಂದು ಗಂಟೆಯ ಒಳಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗುವುದಿಲ್ಲ, ನಾವು ಹಾಗಾಗಿಯೇ ಮತ ಎಣಿಕೆ ಆರಂಭವಾಗಿ ಒಂದು ಗಂಟೆಯ ನಂತರ ಅಂದರೆ 9.30ಕ್ಕೆ ಅದಾದ ಬಳಿಕ 11.30 ನಂತರ 1.30ಕ್ಕೆ ವೆಬ್ ಸೈಟ್ ನಲ್ಲಿ ಅಧಿಕೃತ ಮಾಹಿತಿ ನೀಡುತ್ತೇವೆ. ಮಾಹಿತಿ ನೀಡುವ ಮುನ್ನವೂ ಕೂಡ ಹಲವಾರು ಪ್ರೋಸೆಸ್ ಗಳು ಇರಲಿವೆ. ಆದರೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ನೀವು ಅದು ಹೇಗೆ ಮಾಹಿತಿ ನೀಡುತ್ತೀರಿ ಎಂದು ಪ್ರಶ್ನಿಸಿದರು.


ಎಕ್ಸಿಟ್ ಪೋಲ್ ಗಳು ಒಂದನ್ನು ಹೇಳುತ್ತವೆ ಫಲಿತಾಂಶವು ಅದಕ್ಕಿಂತ ಭಿನ್ನವಾಗಿ ಬರುವುದನ್ನು ಕಂಡಿದ್ದೇವೆ. ಮಾಧ್ಯಮಗಳು ಟ್ರೆಂಡ್ ಗಳನ್ನು ತೋರಿಸುವುದರಲ್ಲಿ ಆತುರ ತೋರುತ್ತಿವೆ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.

Join Whatsapp
Exit mobile version