Home ಟಾಪ್ ಸುದ್ದಿಗಳು ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಮೃತ್ಯು

ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಮೃತ್ಯು

ಕಡಬ: ಧ್ವಜಾರೋಹಣ ವೇಳೆ ನಿವೃತ್ತ ಸೈನಿಕರೋರ್ವರು ಕುಸಿದು ಬಿದ್ದು ಮೃತಪಟ್ಟರುವ ಘಟನೆ ಇಲ್ಲಿನ ಕುಟ್ರುಪಾಡಿಯಲ್ಲಿ ನಡೆದಿದೆ.

ಮೃತ ನಿವೃತ್ತ ಸೈನಿಕನನ್ನು ಕುಟ್ರುಪಾಡಿ ನಿವಾಸಿ ಗಂಗಾಧರ ಗೌಡ ಎಂದು ಗುರುತಿಸಲಾಗಿದೆ. ಗಂಗಾಧರ್ ಅವರು ಬ್ಯಾಂಕ್ ನ ಮಾಜಿ ಅಧ್ಯಕ್ಷ ಎನ್.ಕರುಣಾಕರ ಗೋಗಟೆ ಅವರಿಗೆ ಗ್ರಾ.ಪಂ. ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ಧ್ವಜಾರೋಹಣ ಧ್ವಜ ವಂದನೆಯ ಮಾಹಿತಿ ನೀಡುತ್ತಿದ್ದರು. ಧ್ವಜಾರೋಹಣ ನಡೆಸುವ ವೇಳೆ ಗಂಗಾಧರ ಗೌಡ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ದಾರಿ ಮದ್ಯ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Join Whatsapp
Exit mobile version