Home ಟಾಪ್ ಸುದ್ದಿಗಳು ಮಾಜಿ ಸಚಿವ ನಾಗೇಂದ್ರ ಬಂಧನ ಸನ್ನಿಹಿತ?: ದದ್ದಲ್‌ ಮನೆಯಲ್ಲಿ ಇಂದೂ ಶೋಧ

ಮಾಜಿ ಸಚಿವ ನಾಗೇಂದ್ರ ಬಂಧನ ಸನ್ನಿಹಿತ?: ದದ್ದಲ್‌ ಮನೆಯಲ್ಲಿ ಇಂದೂ ಶೋಧ

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನ ಸನ್ನಿಹಿತವಾದಂತಿದೆ. ನಿನ್ನೆ ನಾಗೇಂದ್ರ ಬೆಂಗಳೂರು , ಬಳ್ಳಾರಿ ನಿವಾಸ, ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಾಲಾಡಿದ್ದಾರೆ.

ಸುಮಾರು 16 ಗಂಟೆ ನಾಗೇಂದ್ರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ತಡರಾತ್ರಿವರೆಗೆ ಪ್ರತೀ ದಾಖಲೆ ತೋರಿಸಿ ಇಡಿ ಪ್ರಶ್ನೆ ಮಾಡಿದೆ. ನಾಗೇಂದ್ರ ಪಿಎ ಹರೀಶನನ್ನು ವಶಕ್ಕೆ ಪಡೆದು ಶಾಂತಿನಗರ ಕಚೇರಿಯಲ್ಲಿ ವಿಚಾರಣೆ ಮಾಡಲಾಗಿತ್ತು. ಹೇಳಿಕೆ ದಾಖಲಿಸಿ ಹರೀಶ್‌ನನ್ನ ಬಿಟ್ಟುಕಳಿಸಲಾಗಿದೆ. ಅಗತ್ಯಬಿದ್ದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ ಸಂಬಂಧ ಶಾಸಕ, ವಾಲ್ಮಿಕಿ ಬೋರ್ಡ್ ಅಧ್ಯಕ್ಷ ಬಸನಗೌಡ ದದ್ದಲ್‌ ಅವ್ರ ಬೆಂಗಳೂರು, ರಾಯಚೂರಿನ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶಾಸಕ ದದ್ದಲ್ ಸಂಬಂಧಿ ಬ್ಯಾಂಕ್ ಅಕೌಂಟ್‌‌ ಸೇರಿ ಹಲವು ದಾಖಲೆ ಪರಿಶೀಲಿಸಿದೆ. ಮೂವರು ಇಡಿ ಅಧಿಕಾರಿಗಳು ಸಂಪೂರ್ಣ ಮನೆಯನ್ನ ಜಾಲಾಡಿ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ. ಸಿಕ್ಕ ದಾಖಲೆಗಳ ಮೇಲೆಯೇ ದದ್ದಲ್‌ ವಿಚಾರಣೆ ಮಾಡುವ ಸಾಧ್ಯತೆ ಇದೆ.ಮ ಇಡಿ ತನಿಖೆಗೆ ಸಹಕರಿಸದೇ ಇದ್ದರೆ ಶಾಸಕ ಬಸವನಗೌಡ ದದ್ದಲ್ ವಶಕ್ಕೆ ಪಡೆಯುವ ಸಾಧ್ಯತೆ. ನಿನ್ನೆ ಇಡೀ ದಿನ ವಿಚಾರಣೆ ಮಾಡಿದ್ದ ಅಧಿಕಾರಿಗಳು ಇಂದು ಮತ್ತೆ ಪರಿಶೀಲನೆ ಮುುಂದುವರಿಸಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ನಾಗೇಂದ್ರಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಇಂದು ವಿಚಾರಣೆಗೆ ಗೈರಾದರೆ ಹಿನ್ನೆಲೆ ಎರಡನೇ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಇನ್ನು ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಪಿಎ ಪಂಪಣ್ಣ ಮನೆಯಲ್ಲಿ ಪಂಚನಾಮೆವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಪ್ರಕರಣ ಕುರಿತಂತೆ ನಿನ್ನೆ ಇಡಿ ಅಧಿಕಾರಿಗಳು ದದ್ದಲ್ ಮಾಜಿ ಪಿಎ ಪಂಪಣ್ಣ ಮನೆಯಲ್ಲಿ ಶೋಧ ನಡೆಸಿದ್ದಾರೆ. ರಾಯಚೂರಿನಲ್ಲಿ ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಮನೆಯಲ್ಲಿ ಸುದೀರ್ಘ ಕಾಲ ಶೋಧ ನಡೆಸಲಾಗಿದೆ. ಪಂಪಣ್ಣ ಮನೆಯಲ್ಲಿ ಇಡಿ ಅಧಿಕಾರಿಗಳಿಂದ ಪಂಚನಾಮೆ ಮಾಡಿದ್ದಾರೆ.

Join Whatsapp
Exit mobile version