Home ಟಾಪ್ ಸುದ್ದಿಗಳು ಅಧಿಕಾರಕ್ಕೆ ಬಂದರೆ ಇವಿಎಂ ರದ್ದು: ಅಖಿಲೇಶ್ ಯಾದವ್

ಅಧಿಕಾರಕ್ಕೆ ಬಂದರೆ ಇವಿಎಂ ರದ್ದು: ಅಖಿಲೇಶ್ ಯಾದವ್

ಲಖನೌ: ನಮ್ಮ ಪಕ್ಷ ಉತ್ತರಪ್ರದೇಶದಲ್ಲಿ ಆಡಳಿತಕ್ಕೆ ಬಂದರೆ ಇವಿಎಂ ವ್ಯವಸ್ಥೆಯನ್ನು ರದ್ದುಗೊಳಿಸುತ್ತೇವೆ ಎಂದು ಸಮಾಜವಾದಿ ಪಕ್ಷದ ನಾಯಕ ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆರಿಕದಂಥ ದೇಶಗಳೇ  ಬ್ಯಾಲೆಟ್​ ಪೇಪರ್ ವ್ಯವಸ್ಥೆಯ ಮತದಾನ ಅಳವಡಿಸಿಕೊಂಡಿವೆ. ಇಲ್ಲಿಯೂ ಕೂಡ ಇವಿಎಂ ರದ್ದುಗೊಳಿಸಿ, ಬ್ಯಾಲೆಟ್​ ಪೇಪರ್ ಮತದಾನ ನಡೆದರೆ ಖಂಡಿತ ಬಿಜೆಪಿ ಸೋಲುತ್ತದೆ. ನಾವು ಉತ್ತರಪ್ರದೇಶದಲ್ಲಿ ಸರ್ಕಾರ ರಚನೆ ಮಾಡಿದರೆ, ಇಲ್ಲಿ ಇವಿಎಂ ಪದ್ಧತಿಯನ್ನು ಖಂಡಿತ ತೆಗೆದುಹಾಕುತ್ತೇವೆ ಎಂದು ಹೇಳಿದ್ದಾರೆ.

Join Whatsapp
Exit mobile version