Home ಟಾಪ್ ಸುದ್ದಿಗಳು ವ್ಯಾಪಾರ ಮಾಡುವ ಹಕ್ಕು ಎಲ್ಲರಿಗೂ ಇದೆ; ಶಾಂತಿ ಕದಡುವ ಕೆಲಸ ಸರಿಯಲ್ಲ: ಜೆ.ಸಿ. ಮಾಧುಸ್ವಾಮಿ

ವ್ಯಾಪಾರ ಮಾಡುವ ಹಕ್ಕು ಎಲ್ಲರಿಗೂ ಇದೆ; ಶಾಂತಿ ಕದಡುವ ಕೆಲಸ ಸರಿಯಲ್ಲ: ಜೆ.ಸಿ. ಮಾಧುಸ್ವಾಮಿ

ಬೆಳಗಾವಿ: ವ್ಯಾಪಾರ ಮಾಡುವ ಹಕ್ಕು ಎಲ್ಲರಿಗೂ ಇದೆ. ಅಂಗಡಿಗಳನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿಹೇಳಿದ್ದಾರೆ.

 ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ ಹೇರುವ ಸಂಘಪರಿವಾರದ  ಅಭಿಯಾನದ ಕುರಿತು  ಮಾತನಾಡಿದ ಅವರು, ತೊಂದರೆ ಕೊಡುವುದು, ಶಾಂತಿ ಕದಡುವ ಕೆಲಸ ಯಾರು ಮಾಡಿದರೂ ಗೌರವ ಬರುವುದಿಲ್ಲ. ಅದರಲ್ಲೂ ಆಡಳಿತ ಪಕ್ಷಕ್ಕಂತೂ ಗೌರವ ಬರುವುದಿಲ್ಲ ‘ ಎಂದು ತಿಳಿಸಿದರು.

‘ಹಿಂದೂಪರ ಸಂಘಟನೆಗಳು ಯಾಕೆ ಈ ರೀತಿ ಮಾಡುತ್ತಿದೆ ಎಂದು ಗೊತ್ತಿಲ್ಲ, ಎಲ್ಲರೂ ಈ ದೇಶದ ಮಕ್ಕಳೇ.  ಇಲ್ಲಿ ಎಲ್ಲರೂ ಭಾರತೀಯರೇ’ ಎಂದು ಹೇಳಿದರು.

Join Whatsapp
Exit mobile version