Home ಟಾಪ್ ಸುದ್ದಿಗಳು ಈ ದೇಶದ ರಾಜಧಾನಿ ತೊರೆದರೆ ಕುಟುಂಬದ ಪ್ರತಿ ಮಗುವಿಗೆ ಸಿಗಲಿದೆ 1 ದಶಲಕ್ಷ ಯೆನ್ !

ಈ ದೇಶದ ರಾಜಧಾನಿ ತೊರೆದರೆ ಕುಟುಂಬದ ಪ್ರತಿ ಮಗುವಿಗೆ ಸಿಗಲಿದೆ 1 ದಶಲಕ್ಷ ಯೆನ್ !

ಜಪಾನ್: ಜನಸಂಖ್ಯಾ ಅಸಮತೋಲನವನ್ನು ಸರಿದೂಗಿಸುವ ನಿಟ್ಟಿನಲ್ಲಿ ರಾಜಧಾನಿ ಟೋಕಿಯೋ ತೊರೆದರೆ ಕುಟುಂಬದ ಪ್ರತಿ ಮಗುವಿಗೆ 1 ದಶಲಕ್ಷ ಯೆನ್ ನೀಡುವುದಾಗಿ ಜಪಾನ್ ಸರ್ಕಾರ ಘೋಷಿಸಿದೆ.


2027ರ ವೇಳೆಗೆ 10,000 ಜನರನ್ನು ಟೋಕಿಯೊದಿಂದ ಗ್ರಾಮೀಣ ಪ್ರದೇಶಗಳಿಗೆ ಸ್ಥಳಾಂತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಈ ಹೊಸ ಯೋಜನೆ ಏಪ್ರಿಲ್’ನಿಂದ ಜಾರಿಗೆ ಬರಲಿದೆ.


ದೇಶದ ಗ್ರಾಮೀಣ ಭಾಗಗಳಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆಯಾಗಿದ್ದು, ಸೌಲಭ್ಯಗಳು ಉತ್ತಮವಾಗಿರುವ ನಗರ ಪ್ರದೇಶಗಳತ್ತ ಜನರು ವಲಸೆ ಹೋಗಿದ್ದಾರೆ ಎನ್ನಲಾಗಿದೆ.
ಇನ್ನು ಒಂದು ಮಿಲಿಯನ್ ಯೆನ್ ಪರಿಹಾರದ ಜೊತೆಗೆ, ಕೇಂದ್ರ ಟೋಕಿಯೊ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಐದು ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳು ಮಕ್ಕಳಿಗೆ ಬೆಂಬಲ ನಿಧಿಯನ್ನು ಸಹ ಪಡೆಯುತ್ತವೆ. ಕುಟುಂಬಗಳು ಸ್ಥಳೀಯ ಪ್ರದೇಶದಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಹೆಚ್ಚುವರಿ ಬೆಂಬಲವನ್ನು ಸಹ ಒದಗಿಸಲಾಗುವುದು ಎಂದು ವರದಿ ತಿಳಿಸಿದೆ.

Join Whatsapp
Exit mobile version