ಮುಂಬರುವ ಚುನಾವಣೆ ನಂತರವೂ ತಂದೆಯೇ ಮುಖ್ಯಮಂತ್ರಿ: ನಿತೀಶ್‌ ಪುತ್ರ

- Advertisement -

ಪಟ್ನಾ: ಮುಂಬರುವ ವಿಧಾನಸಭೆ ಚುನಾವಣೆ ಬಳಿಕವೂ ನಿತೀಶ್‌ ಕುಮಾರ್‌ ಅವರೇ ಬಿಹಾರ ಮುಖ್ಯಮಂತ್ರಿಯಾಗಿ ಮಂದುವರಿಯಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ ಎಂದು ನಿತೀಶ್‌ ಕುಮಾರ್‌ ‍ಪುತ್ರ ನಿಶಾಂತ್ ಹೇಳಿದರು.

- Advertisement -

ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಎನ್‌ಡಿಎ ಜಯಗಳಿಸಿದ ನಂತರ ನಿತೀಶ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ಸಂಶಯ ಬೇಡ. ಇತ್ತೀಚೆಗೆ ಭೇಟಿ ನೀಡಿದ್ದ ಅಮಿತ್‌ ಶಾ ಅವರು ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌದರಿ ಅವರೂ ಇದನ್ನೇ ಹೇಳಿದ್ದಾರೆ’ ಎಂದರು.

‘ನನ್ನ ತಂದೆ ಶೇ100ರಷ್ಟು ಫಿಟ್‌ ಆಗಿದ್ದಾರೆ. ಮತ್ತೆ 5 ವರ್ಷ ಸರ್ಕಾರ ನಡೆಸಲು ಅವರು ಸಮರ್ಥರಾಗಿದ್ದಾರೆ’ ಎಂದು ಹೇಳಿದರು.

- Advertisement -


Must Read

Related Articles