Home ಕರಾವಳಿ ನಾಳೆಯಿಂದ ಎಸ್ಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ: ನಿಷೇಧಾಜ್ಞೆ ಜಾರಿ

ನಾಳೆಯಿಂದ ಎಸ್ಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ: ನಿಷೇಧಾಜ್ಞೆ ಜಾರಿ

ಮಂಗಳೂರು: ಎಸ್ಸೆಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಾಳೆ ಸೋಮವಾರದಿಂದ ಆರಂಭಗೊಳ್ಳಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮಂಗಳೂರಿನ ಮಲ್ಲಿಕಟ್ಟೆ ಕಪಿತಾನಿಯೋ ಹೈಸ್ಕೂಲ್, ಬೆಂದೂರು ಸೈಂಟ್ ಆಗ್ನೇಸ್ ಹೈಸ್ಕೂಲ್, ಬೋಂದೆಲ್ ಸೈಂಟ್ ಲಾರೆನ್ಸ್ ಹೈಸ್ಕೂಲ್, ಉರ್ವಾ ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್, ಕುಲಶೇಖರ ಸೆಕ್ರೆಟ್ ಹಾರ್ಟ್ ಹೈಸ್ಕೂಲ್, ಕೊಡಿಯಾಲ್ ಬೈಲ್ ಬೆಸೆಂಟ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಹಾಗೂ ಹಂಪನಕಟ್ಟೆ ಮಿಲಾಗ್ರಿಸ್ ಹೈಸ್ಕೂಲ್ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಈ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮೌಲ್ಯಮಾಪನ ಮುಗಿಯುವವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.

Join Whatsapp
Exit mobile version