Home ಟಾಪ್ ಸುದ್ದಿಗಳು ಯುರೋಪ್ ಒಕ್ಕೂಟ ಶೃಂಗಸಭೆ: ಮಿತ್ರರಾಷ್ಟ್ರಗಳೊಂದಿಗೆ ಫೈಟರ್ ಜೆಟ್ ಪೂರೈಕೆಗೆ ಝೆಲೆನ್ಸ್ಕಿ ಒತ್ತಾಯ ಸಾಧ್ಯತೆ

ಯುರೋಪ್ ಒಕ್ಕೂಟ ಶೃಂಗಸಭೆ: ಮಿತ್ರರಾಷ್ಟ್ರಗಳೊಂದಿಗೆ ಫೈಟರ್ ಜೆಟ್ ಪೂರೈಕೆಗೆ ಝೆಲೆನ್ಸ್ಕಿ ಒತ್ತಾಯ ಸಾಧ್ಯತೆ

ಬ್ರುಸೆಲ್ಸ್: ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಬಳಿಕ ಮೊದಲ ಬಾರಿಗೆ ಬ್ರಿಟನ್ ಹಾಗೂ ಫ್ರಾನ್ಸ್ಗೆ ಭೇಟಿ ಕೊಟ್ಟಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಉಭಯ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.


ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ರಾಜ ಮೂರನೇ ಚಾರ್ಲ್ಸ್ ಅವರನ್ನು ಭೇಟಿ ಮಾಡಿದ ಝೆಲೆನ್ಸ್ಕಿ ಬಳಿಕ ಬ್ರಿಟನ್ ಸಂಸತ್ತನ್ನು ಉದ್ದೇಶಿ ಮಾತನಾಡಿದರು.


ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್ನಲ್ಲಿ ಗುರುವಾರ ನಡೆಯಲಿರುವ ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಖ್ಯ ಆತಿಥಿಯಾಗಿ ಪಾಲ್ಗೊಳ್ಳಲಿದ್ದು, ರಷ್ಯಾ ವಿರುದ್ಧದ ಯುದ್ಧದಲ್ಲಿ ಸಾಧ್ಯವಾದಷ್ಟು ಫೈಟರ್ ಜೆಟ್ಗಳನ್ನು ತಲುಪಿಸಲು ಮಿತ್ರರಾಷ್ಟ್ರಗಳನ್ನು ಒತ್ತಾಯಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ ಝೆಲೆನ್ಸ್ಕಿ ಚರ್ಚೆ ನಡೆಸಿದ್ದಾರೆ.


ಈ ಮಧ್ಯೆ ರಷ್ಯಾ ಆಕ್ರಮಣದ ವಿರುದ್ಧ ಹೋರಾಡಲು ಉಕ್ರೇನ್ಗೆ ನೆರವು ಮಾಡಲು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಲು ಬದ್ಧವಾಗಿದ್ದೇವೆ ಎಂದು ಬ್ರಿಟನ್ ಹಾಗೂ ಫ್ರಾನ್ಸ್ ಹೇಳಿದೆ.

Join Whatsapp
Exit mobile version