Home ಟಾಪ್ ಸುದ್ದಿಗಳು ಕಾನ್ಪುರ ಗಲಭೆ ಸಂತ್ರಸ್ತರ ಭೇಟಿಗೆ ಮುಂದಾದ ಸಂಸದ ಇಟಿ ಮುಹಮ್ಮದ್ ಬಶೀರ್ ಬಂಧನ

ಕಾನ್ಪುರ ಗಲಭೆ ಸಂತ್ರಸ್ತರ ಭೇಟಿಗೆ ಮುಂದಾದ ಸಂಸದ ಇಟಿ ಮುಹಮ್ಮದ್ ಬಶೀರ್ ಬಂಧನ

ಕಾನ್ಪುರ: ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಗಲಭೆ ಪೀಡಿತ ಸಂತ್ರಸ್ತರನ್ನು ಭೇಟಿಯಾಗಲು ತೆರಳಿದ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಸಂಸದ ಇಟಿ ಮುಹಮ್ಮದ್ ಬಶೀರ್ ಮತ್ತು ನಿಯೋಗವನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದ ಮುಸ್ಲಿಮರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸುತ್ತಿರುವ ಮಧ್ಯೆ ಸಂತ್ರಸ್ತರನ್ನು ಭೇಟಿ ಮಾಡಲು ಮುಂದಾದ ಇಟಿ ಮುಹಮ್ಮದ್ ಬಶೀರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಹಿರಿಯ ಅಧಿಕಾರಿಗಳು ಮನವಿಯ ಮೇರೆಗೆ ಇದೀಗ ದೆಹಲಿ ಕಡೆ ಹೋಗುತ್ತಿದ್ದೇನೆ. ಅಲ್ಲದೆ ಪ್ರಜಾಸತ್ತಾತ್ಮಕ ವರ್ತನೆಯ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ಕಾನ್ಪುರ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 54 ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇದನ್ನು ವಿರೋಧಿಸಿ ಸಂಸದ ಇಟಿ ಮುಹಮ್ಮದ್ ಬಶೀರ್ ಅವರು ಸಂತ್ರಸ್ತರನ್ನು ಭೇಟಿಯಾಗಲು ಮುಂದಾಗಿದ್ದರು.

Join Whatsapp
Exit mobile version