Home ಟಾಪ್ ಸುದ್ದಿಗಳು ಪಶ್ಚಿಮ ಬಂಗಾಳದ ಇಂಗ್ಲಿಷ್ ಮೀಡಿಯಂ ಮದ್ರಸಾಗಳಿಗೆ ನೇಮಕಗೊಂಡ 12 ಶಿಕ್ಷಕರಲ್ಲಿ ಕೇವಲ ಒಬ್ಬ ಮುಸ್ಲಿಂ!

ಪಶ್ಚಿಮ ಬಂಗಾಳದ ಇಂಗ್ಲಿಷ್ ಮೀಡಿಯಂ ಮದ್ರಸಾಗಳಿಗೆ ನೇಮಕಗೊಂಡ 12 ಶಿಕ್ಷಕರಲ್ಲಿ ಕೇವಲ ಒಬ್ಬ ಮುಸ್ಲಿಂ!

ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿನ ಇಂಗ್ಲಿಷ್ ಮಾಧ್ಯಮ ಮದ್ರಸಾಗಳ ಶಿಕ್ಷಕರ ನೇಮಕಾತಿ ವಿಷಯದಲ್ಲಿ ಭಾರೀ ಟೀಕೆಗಳು ಕೇಳಿ ಬಂದಿವೆ. ಅಲ್ಲಿ ರಾಜ್ಯ ಸಾರ್ವಜನಿಕ ಸೇವಾ ಆಯೋಗ ಇತ್ತೀಚೆಗೆ ನೇಮಕ ಮಾಡಿರುವ ಮದ್ರಾಸಗಳ 12 ಶಿಕ್ಷಕರಲ್ಲಿ ಕೇವಲ ಒಬ್ಬ ಮುಸ್ಲಿಮ್ ಅಭ್ಯರ್ಥಿಯ ಹೆಸರಿದೆ.

2020 ಜುಲೈನಲ್ಲಿ ಇಂಗ್ಲಿಷ್ ಮಾಧ್ಯಮ ಮದ್ರಸಾಗಳಿಗೆ ನೇಮಕಗೊಂಡ 12 ಶಿಕ್ಷಕರ ಪಟ್ಟಿಯಲ್ಲಿ ಒಬ್ಬ ಮುಸ್ಲಿಮ್ ಅಭ್ಯರ್ಥಿಯ ಹೆಸರೂ ಇರಲಿಲ್ಲ. ಪಶ್ಚಿಮ ಬಂಗಾಳದ ಸರಕಾರಿ ಇಂಗ್ಲಿಷ್ ಮಾಧ್ಯಮ ಮದ್ರಸಾಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವುದಕ್ಕೆ ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು ವ್ಯಾಪಕ ಕಳವಳ ವ್ಯಕ್ಯಪಡಿಸಿದ್ದಾರೆ.

Join Whatsapp
Exit mobile version