Home ಟಾಪ್ ಸುದ್ದಿಗಳು ಭಾರತೀಯ ಅಮೆರಿಕನ್ ಬಿದಿಶಾ ಭಟ್ಟಾಚಾರ್ಯಗೆ ಅಮೆರಿಕದ ಕೃಷಿ ಇಲಾಖೆಯಲ್ಲಿ ಪ್ರಮುಖ ಹುದ್ದೆ

ಭಾರತೀಯ ಅಮೆರಿಕನ್ ಬಿದಿಶಾ ಭಟ್ಟಾಚಾರ್ಯಗೆ ಅಮೆರಿಕದ ಕೃಷಿ ಇಲಾಖೆಯಲ್ಲಿ ಪ್ರಮುಖ ಹುದ್ದೆ

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತವು ಭಾರತೀಯ-ಅಮೆರಿಕನ್ ಹವಾಮಾನ ಮತ್ತು ಇಂಧನ ತಜ್ಞೆ ಬಿದಿಶಾ ಭಟ್ಟಾಚಾರ್ಯರನ್ನು ಕೃಷಿ ಇಲಾಖೆಯ ಪ್ರಮುಖ ಸ್ಥಾನಕ್ಕೆ ನೇಮಕ ಮಾಡಿದೆ. ಗ್ರಾಮೀಣ ಭಾರತದಲ್ಲಿ ಸೌರಶಕ್ತಿ ಪರಿಹಾರಗಳನ್ನು ನಿಯೋಜಿಸಲು ಮೂರು ವರ್ಷ ಕಳೆದಿದ್ದ ಬಿದಿಶಾರನ್ನು, ಪ್ರಸ್ತುತ ಕೃಷಿ ಸೇವಾ ಸಂಸ್ಥೆಯ ಹಿರಿಯ ನೀತಿ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಹಿಂದೆ ಅವರು ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್‌ ನಲ್ಲಿ ಹವಾಮಾನ ಮತ್ತು ಇಂಧನ ನೀತಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಮೆರಿಕನ್ ಪ್ರೋಗ್ರೆಸ್ ಗೆ ಸೇರುವ ಮೊದಲು, ಭಟ್ಟಾಚಾರ್ಯ ಅವರು ಇಂಪ್ಯಾಕ್ಟ್-ಇನ್ವೆಸ್ಟ್ಮೆಂಟ್ ಸಂಸ್ಥೆ ವಿಲೇಜ್ ಕ್ಯಾಪಿಟಲ್ ನಲ್ಲಿ ಎಮರ್ಜಿಂಗ್ ಮಾರ್ಕೆಟ್ಸ್ ನ ಉಪಾಧ್ಯಕ್ಷರಾಗಿದ್ದರು. ಅಲ್ಲಿ ಅವರು ಭಾರತ, ಮೆಕ್ಸಿಕೊ ಮತ್ತು ಪೂರ್ವ ಆಫ್ರಿಕಾದಾದ್ಯಂತ ಜಾಗತಿಕ ತಂಡವನ್ನು ಮುನ್ನಡೆಸುತ್ತಿದ್ದರು

ಭಟ್ಟಾಚಾರ್ಯ ಸೈಂಟ್ ಓಲಾಫ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಇದೀಗ ಅಮೇರಿಕಾದ ಕೃಷಿ ಸೇವಾ ಸಂಸ್ಥೆಯ ಗೌರವ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

Join Whatsapp
Exit mobile version