ವಾಷಿಂಗ್ಟನ್ : ಗಿಫ್ ಮೂಲಕ ಜಗತ್ ಪ್ರಸಿದ್ಧಿಯಾಗಿದ್ದ ಎಮೋಜಿ ಸುಂದರಿ ಕೈಲಿಯಾ ಪೋಸಿ (16) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಕೈಲಿಯಾ ತಾಯಿ ತಮ್ಮ ಮಗಳ ನಿಧನದ ಕುರಿತು ತಿಳಿಸಿದ್ದಾರೆ.
ಕೈಲಿಯಾ ಚಿಕ್ಕ ವಯಸ್ಸಿನಲ್ಲೇ ತನ್ನ ಕ್ಯೂಟ್ ನಗು ಹಾಗೂ ಮುಖಭಾವದಿಂದ ‘ಗ್ರಿನಿಂಗ್ ಗರ್ಲ್’ ಎಂದೇ ಸಾಮಾಜಿಕ ಜಾಲತಾಣಲದಲ್ಲಿ ಜನಪ್ರಿಯರಾಗಿದ್ದಳು. ಆಕೆಯ ಮುಗ್ದ ಮುಖಭಾವಗಳನ್ನು ಜನರು ಗಿಫ್, ಸ್ಟಿಕರ್, ಎಮೋಜಿ ಹೀಗೆ ಹಲವು ವಿಧಗಳಲ್ಲಿ ತಮ್ಮ ಫೋನ್ ಗಳಲ್ಲಿ ಶೇರ್ ಮಾಡುತಿದ್ದರು.
ಕೈಲಿಯಾ ಪೋಸಿ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ.