Home ಟಾಪ್ ಸುದ್ದಿಗಳು ವಾಶ್ ಬೇಸಿನ್ ಹಿಡಿದು ಟ್ವಿಟರ್ ಕಚೇರಿಗೆ ಬಂದ ಎಲಾನ್ ಮಸ್ಕ್

ವಾಶ್ ಬೇಸಿನ್ ಹಿಡಿದು ಟ್ವಿಟರ್ ಕಚೇರಿಗೆ ಬಂದ ಎಲಾನ್ ಮಸ್ಕ್

ಅಮೆರಿಕ: ಟ್ವಿಟರ್ ಸ್ವಾಧೀನ ಒಪ್ಪಂದವು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದು, ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಬುಧವಾರ ಟ್ವಿಟರ್ ಪ್ರಧಾನ ಕಚೇರಿಗೆ ಕೈತೊಳೆಯುವ ವಾಶ್ ಬೇಸಿನ್ ಅನ್ನು ಹಿಡಿದುಕೊಂಡು ಆಗಮಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಎಲಾನ್ ಮಸ್ಕ್, ಟ್ವಿಟರ್ ಕಚೇರಿಗೆ ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.


ವಿಡಿಯೋದಲ್ಲಿ ಮಸ್ಕ್ ಬೃಹತ್ ಬಿಳಿ ಬಣ್ಣದ ಕೈ ತೊಳೆಯುವ ವಾಶ್ ಬೇಸಿನ್ ನೊಂದಿಗೆ ಟ್ವಿಟರ್ ಕಚೇರಿಗೆ ಪ್ರವೇಶಿಸಿದ್ದಾರೆ. ‘ಅದು ಮುಳುಗಲು ಬಿಡಿ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಅಲ್ಲದೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬೇರೆ ಬೇರೆ ರೀತಿಯ ಕ್ಯಾಪ್ಷನ್ ನೀಡುತ್ತಿದ್ದಾರೆ.

Join Whatsapp
Exit mobile version