Home ಟಾಪ್ ಸುದ್ದಿಗಳು 200ರೂ. ನೋಟನ್ನು ವಿರೂಪಗೊಳಿಸಿ ವಿವಾದ ಹುಟ್ಟುಹಾಕಿದ ಬಿಜೆಪಿ ನಾಯಕ

200ರೂ. ನೋಟನ್ನು ವಿರೂಪಗೊಳಿಸಿ ವಿವಾದ ಹುಟ್ಟುಹಾಕಿದ ಬಿಜೆಪಿ ನಾಯಕ

ನವದೆಹಲಿ: ಭಾರತೀಯ ಕರೆನ್ಸಿಯ ನೋಟುಗಳ ಮೇಲೆ ಲಕ್ಷ್ಮೀದೇವಿ ಹಾಗೂ ಗಣೇಶನ ಚಿನ್ಹೆಗಳನ್ನು ಮುದ್ರಿಸಬೇಕು ಎಂದು ವಿವಾದ ಸೃಷ್ಟಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ ಬೆನ್ನಲ್ಲೇ, 200 ರೂ. ಮುಖಬೆಲೆಯ ನೋಟಿನ ಮೇಲೆ ಶಿವಾಜಿ ಚಿತ್ರವನ್ನು ಫೋಟೋಶಾಪ್ ಮಾಡಿ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಬಿಜೆಪಿ ನಾಯಕ ನಿತೇಶ್ ರಾಣೆ ಹಂಚಿಕೊಂಡು ವಿವಾದ ಹುಟ್ಟುಹಾಕಿದ್ದಾರೆ

ಕಂಕಾವ್ಲಿಯ ಶಾಸಕ ರಾಣೆ ಅವರು ಫೋಟೋವನ್ನು ಟ್ವೀಟ್ ಮಾಡಿ, `ಯೇ ಪರ್ಫೆಕ್ಟ್ ಹೈ (ಇದು ಸರಿಯಾಗಿದೆ)’ ಎಂದು ಶೀರ್ಷಿಕೆ ನೀಡಿದ್ದಾರೆ.

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಎದುರಾಳಿಯಾಗಿ ಹೊರಹೊಮ್ಮಿರುವ ಕೇಜ್ರಿವಾಲ್, ಭಾರತೀಯ ಕರೆನ್ಸಿಯ ಮೇಲೆ ಲಕ್ಷ್ಮೀದೇವಿ ಮತ್ತು ಗಣೇಶನ ಚಿತ್ರಗಳನ್ನು ಮುದ್ರಿಸುವಂತೆ ಸೂಚಿಸಿದ್ದಾರೆ. ಇದು ಆರ್ಥಿಕತೆ ಹೆಚ್ಚಿಸುವ ಒಂದು ಮಾರ್ಗವಾಗಿದೆ. ಜೊತೆಗೆ ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿತವಾಗುವುದನ್ನು ತಡೆಯುತ್ತದೆ ಎಂದು ಅವರು ಹೇಳಿದ್ದರು.

Join Whatsapp
Exit mobile version