ಸಂಖ್ಯೆಯಲ್ಲೂ ದಾಖಲೆ
ಕೊಯಮತ್ತೂರು: ಕೆ. ಪದ್ಮರಾಜನ್ ಅವರು ಎಲೆಕ್ಷನ್ ಕಿಂಗ್’ ಎಂದೇ ಖ್ಯಾತರಾಗಿದ್ದು, ಇದೀಗ 227ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಫೆಬ್ರವರಿ 19 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಆರಂಭವಾದ ಬಳಿಕ ನಾಮಪತ್ರ ಸಲ್ಲಿಸಿದ ಸ್ಪರ್ಧಿಗಳಲ್ಲಿ ಪದ್ಮರಾಜನ್ ಮೊದಲಿಗರಾಗಿದ್ದಾರೆ.
ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಚುನಾಚಣೆಯಲ್ಲಿ ಸ್ಪರ್ಧಿಸಿದ ದಾಖಲೆಯನ್ನು ಮಾಡಿದ ಪದ್ಮರಾಜನ್ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ವಿರುದ್ಧವೂ ಸ್ಪರ್ಧಿಸಿದ್ದರು.
ಪದ್ಮರಾಜನ್ ಮೊದಲು 1986 ರಲ್ಲಿ ಮೆಟ್ಟೂರಿನಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಬಳಿಕ ಅಟಲ್ ಬಿಹಾರಿ ವಾಜಪೇಯಿ (ಲಖನೌ), ಮನಮೋಹನ್ ಸಿಂಗ್, ಪಿವಿ ನರಸಿಂಹ ರಾವ್ (ನಂದ್ಯಾಲ್) ವಿರುದ್ಧ ಸ್ಪರ್ಧಿಸಿದ್ದರು. ಅಲ್ಲದೆ, ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್, ಕೆಆರ್ ನಾರಾಯಣನ್ ವಿರುದ್ಧವೂ ಸ್ಪರ್ಧಿಸಿದ್ದರು. 62 ವರ್ಷದ ಪದ್ಮರಾಜನ್ ಈಗ ವೆರಕಲ್ಪುದೂರ್ -ವಾರ್ಡ್-2ರಲ್ಲಿ ಸ್ಪರ್ಧೆಯಲ್ಲಿದ್ದಾರೆ.