ಕಾಪು ಎಸ್’ಡಿಪಿಐ ಅಭ್ಯರ್ಥಿಗೆ ಆಟೋ ರಿಕ್ಷಾ ಚಿಹ್ನೆ ನೀಡಿದ ಚುನಾವಣಾ ಆಯೋಗ

Prasthutha|

ಕಾಪು: ಕಾಪು ವಿಧಾನಸಭಾ ಕ್ಷೇತ್ರದಿಂದ ಎಸ್ ಡಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುಹಮ್ಮದ್ ಹನೀಫ್  ಅವರಿಗೆ ಚುನಾವಣೆ ಆಯೋಗ ಆಟೋ ರಿಕ್ಷಾ ಚಿಹ್ನೆ ನೀಡಿದೆ.

- Advertisement -

ಕಾಪು ವಿಧಾನಸಭಾ ಕ್ಷೇತ್ರದ SDPI ಅಭ್ಯರ್ಥಿಗೆ ಚುನಾವಣಾ ಆಯೋಗವು ಕ್ರಮ ಸಂಖ್ಯೆ 5ರಲ್ಲಿ ಆಟೋ ರಿಕ್ಷಾ ಚಿಹ್ನೆ ನೀಡಿ ಅಂತಿಮಗೊಳಿಸಿದೆ.

ಈ ಬಾರಿ ನನ್ನನ್ನು ಆಯ್ಕೆ ಮಾಡಿದರೆ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತು. ಸರ್ಕಾರಿ ಪದವಿ ಪೂರ್ವ ಮತ್ತು ಡಿಗ್ರಿ ಕಾಲೇಜು ಸ್ಥಾಪನೆ.  ಕುಡಿಯುವ ನೀರಿಗೆ ಶಾಶ್ವತ ಪರಿಹಾರ. ಉಚಿತ ಮಾಹಿತಿ ಮತ್ತು ಸೇವಾ ಕೇಂದ್ರ ಸ್ಥಾಪನೆ. ಅಲ್ಪಸಂಖ್ಯಾತರ ರಕ್ಷಣೆಗೆ ವಿಶೇಷ ಕಾನೂನಿಗೆ ಆಗ್ರಹ. ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ವ್ಯವಸ್ಥೆ,  ಸುಸಜ್ಜಿತ ಆಟದ ಮೈದಾನ ಸ್ಥಾಪನೆ.  ಸುಸಜ್ಜಿತ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆ. ಸುಸಜ್ಜಿತ ಮಾರುಕಟ್ಟೆಯ ವ್ಯವಸ್ಥೆ. IAS,IPS ಸೇರಿದಂತೆ ನಾಗಲಕ ಸೇವಾ ಹುದ್ದೆ ಮತ್ತು ಸರ್ಕಾರಿ ಹುದ್ದೆಗಳಲ್ಲಿ ಭಡ್ತಿ ಪಡೆಯಲು ಉಚಿತ ತರಬೇತಿ. ಪಾಳು ಬಿದ್ದಿರುವ ಸರ್ಕಾಲ ಕಚೇರಿ ಹಾಗೂ ಶಾಲಾ ಕಟ್ಟಡಗಳ ಸುಸಜ್ಜಿತವಾದ ಪುನರ್ ನಿರ್ಮಾಣ.  ಪ್ರಕೃತಿ ವಿಕೋಪ ಮತ್ತು ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ವೈಜ್ಞಾನಿಕವಾದ ಮುಂಜಾಗೃತಾ ಕ್ರಮ. ಕ್ಷೇತ್ರ ವ್ಯಾಪ್ತಿಯ ನಿರ್ಗತಿಕರಿಗೆ ಉಚಿತ ಊಟದ ಮನೆ. ಕಾನೂನು ಬಾಹಿರ ಚಟುವಟಕೆಗಳಿಗೆ ಸಂಪೂರ್ಣ ತಡೆ ಎಂದು ಮುಹಮ್ಮದ್ ಹನೀಫ್  ಅವರು ಭರವಸೆ ನೀಡಿದ್ದಾರೆ.

- Advertisement -



Join Whatsapp
Exit mobile version