Home ಟಾಪ್ ಸುದ್ದಿಗಳು ಬಿಜೆಪಿಗೆ ಸೇರದಿದ್ದರೆ ಇ.ಡಿ ನನ್ನನ್ನೂ ಬಂಧಿಸುತ್ತದೆ: ಸಚಿವೆ ಅತಿಶಿ

ಬಿಜೆಪಿಗೆ ಸೇರದಿದ್ದರೆ ಇ.ಡಿ ನನ್ನನ್ನೂ ಬಂಧಿಸುತ್ತದೆ: ಸಚಿವೆ ಅತಿಶಿ

ನವದೆಹಲಿ: ಬಿಜೆಪಿಗೆ ಸೇರದೆ ಹೋದರೆ ಮುಂಬರುವ ದಿನಗಳಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ನನ್ನನ್ನೂ ಬಂಧಿಸುವ ಸಾಧ್ಯತೆಯಿದೆ ಎಂದು ಎಎಪಿ ಸಚಿವೆ ಅತಿಶಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನನ್ನನ್ನು ಸೇರಿದಂತೆ ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾರನ್ನು ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ ಎಂದರು.


‘ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದರು ಕೂಡ ಎಎಪಿ ಬಲಿಷ್ಠವಾಗಿ ನಿಂತಿದೆ ಎಂದು ಬಿಜೆಪಿಗೆ ಅನಿಸುತ್ತಿದೆ. ಈಗ ಅದು ಎಎಪಿಯ ಮುಂದಿನ ನಾಯಕನನ್ನು ಜೈಲಿಗೆ ಹಾಕಲು ಯೋಜಿಸುತ್ತಿದೆ. ಸೋಮವಾರ ನ್ಯಾಯಾಲಯದ ಮುಂದೆ ಇ.ಡಿ ನನ್ನ ಮತ್ತು ಸೌರಭ್ ಭಾರಧ್ವಜ್ ಅವರ ಹೆಸರು ಹೇಳಿರುವುದೇ ಇದಕ್ಕೆ ಸಾಕ್ಷಿ’ ಎಂದರು.

Join Whatsapp
Exit mobile version