Home ಟಾಪ್ ಸುದ್ದಿಗಳು ಅಂಗಡಿಗೆ ನುಗ್ಗಿದ ಕಾರು: ಹಲವಾರು ಮಂದಿಗೆ ಗಾಯ

ಅಂಗಡಿಗೆ ನುಗ್ಗಿದ ಕಾರು: ಹಲವಾರು ಮಂದಿಗೆ ಗಾಯ

ನವದೆಹಲಿ: ದೆಹಲಿಯ ರಾಜ್ ಪುರ್ ನಲ್ಲಿ ವೇಗವಾಗಿ ಬಂದ ಕಾರೊಂದು ಕಚೋರಿ ಅಂಗಡಿಯೊಂದಕ್ಕೆ ನುಗ್ಗಿ ಹಲವಾರು ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.


ಇದೀಗ ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಅದೃಷ್ಟವಶಾತ್ ಅಪಘಾತದಲ್ಲಿ ಸಾವು ಸಂಭವಿಸಿಲ್ಲ ಎನ್ನಲಾಗಿದೆ. ಕೆಲವು ಮಂದಿ ಗ್ರಾಹಕರು ಅಂಗಡಿಯಲ್ಲಿ ಕಚೋರಿ ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಅತಿವೇಗದಿಂದ ಬಂದ ಕಾರು ಅಂಗಡಿಗೆ ನುಗ್ಗಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.

Join Whatsapp
Exit mobile version