Home ಟಾಪ್ ಸುದ್ದಿಗಳು ಖ್ಯಾತ ಅನಿವಾಸಿ ಉದ್ಯಮಿ ಯೂಸುಫ್ ಅಲಿಗೆ ED ಸಮನ್ಸ್

ಖ್ಯಾತ ಅನಿವಾಸಿ ಉದ್ಯಮಿ ಯೂಸುಫ್ ಅಲಿಗೆ ED ಸಮನ್ಸ್

ನವದೆಹಲಿ: ಲುಲು ಮಾಲ್ ಗುಂಪುಗಳ ಒಡೆಯ, ಯುಎಇ ನೆಲೆಯ ಉದ್ಯಮಿ ಎಂ. ಎ. ಯೂಸುಫ್ ಅಲಿ ಅವರಿಗೆ ಜಾರಿ ನಿರ್ದೇಶನಾಲಯ-ಇಡಿ ಅಕ್ರಮ ಹಣ ವರ್ಗಾವಣೆ ಸಂಬಂಧ ಸಮನ್ಸ್ ಜಾರಿ ಮಾಡಿದೆ.


ರೂ. 300 ಕೋಟಿಗಳಷ್ಟು ಹಣ ವರ್ಗಾವಣೆ ಮಾಡಿರುವುದಾಗಿ ಇ.ಡಿ. ಆರೋಪಿಸಿದೆ. ಯುನೈಟೆಡ್ ಅರಬ್’ನಲ್ಲಿದ್ದುಕೊಂಡು ಖಾಸಗಿ ಸಂಸ್ಥೆಗಳ ಮೂಲಕ ಕೇರಳ ಸರಕಾರದೊಂದಿಗೆ ಜಂಟಿ ಯೋಜನೆಯಾಗಿ ಲೈಫ್ ಮಿಶನ್ ಎಂಬ ಜನ ಮನೆ ನಿರ್ಮಾಣದಲ್ಲಿ ಅಲಿ ಅಕ್ರಮ ಎಸಗಿದ್ದಾರೆ ಎಂದು ಇ.ಡಿ.ಹೇಳಿದೆ.


ಮಾರ್ಚ್ 1ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಕೊಚ್ಚಿ ಕಚೇರಿಯು ಯೂಸುಫ್ ಅಲಿಯವರಿಗೆ ಹಿಂದೆ ನೋಟಿಸ್ ನೀಡಿತ್ತು. ಯುಎಇಯಲ್ಲಿರುವ ಅಲಿಯವರಿಗೆ ಬರಲಾಗಿಲ್ಲ. ಮಾರ್ಚ್ 16ರಂದು ಕೊಚ್ಚಿ ಇಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಅಕ್ರಮ ಹಣ ವರ್ಗಾವಣೆ ತಡೆ ಏಜೆನ್ಸಿಯು ಆಲಿಯವರಿಗೆ ಸಮನ್ಸ್ ನೀಡಿದೆ. ಚಿನ್ನದ ಅಕ್ರಮ ಸಾಗಣೆ ಸಂಬಂಧ ಬಂಧಿಸಲಾಗಿರುವ ತಿರುವನಂತಪುರದ ಯುಎಇ ರಾಯಭಾರಿ ಕಚೇರಿಯ ಹಿಂದಿನ ಉದ್ಯೋಗಿ ಸ್ವಪ್ನ ಸುರೇಶ್ ಪ್ರಕರಣದಲ್ಲಿ ಇತ್ತೀಚೆಗೆ ಅಲಿ ಹೆಸರು ಕೇಳಿ ಬಂದಿತ್ತು. ಹಿಂದೆ ಈಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಶಿವಶಂಕರನ್ ಕೂಡ ಈ ಚಿನ್ನದ ಕಳ್ಳ ಸಾಗಣೆ ವ್ಯವಹಾರದಲ್ಲಿ ಹುದ್ದೆ ದುರುಪಯೋಗಿಸಿಕೊಂಡುದಕ್ಕಾಗಿ ಬಂಧಿಸಲ್ಪಟ್ಟಿದ್ದಾರೆ.
ಶಿವಶಂಕರನ್ ಅವರು ಮನೆ ನಿರ್ಮಾಣದ ಕೇರಳದ ಲೈಫ್ ಮಿಶನ್ ಕಾರ್ಯಕ್ರಮದಲ್ಲಿ ಅಕ್ರಮ ಎಸಗಿರುವುದು ಸಹ ತಿಳಿದು ಬಂದಿದೆ. ಈ ವಿವಾದದ ಮನೆ ಯೋಜನೆಯನ್ನು ಖಾಸಗಿಯವರ ಪಾಲುದಾರಿಕೆಯಲ್ಲಿ ಮಾಡಲಾಗಿದೆ. ಈ ಖಾಸಗಿ ಪಾಲುದಾರ ಕಂಪೆನಿಗಳು ಯುಎಇ ಮೂಲದವಾಗಿದ್ದು, ಅವುಗಳಲ್ಲಿ ಕೆಲವು ಯೂಸುಫ್ ಅಲಿ ಒಡೆತನದವು ಎಂದು ಹೇಳಲಾಗಿದೆ. ಈ ಲೈಫ್ ಮಿಶನ್ ಯೋಜನೆಯಡಿ ಯೂಸುಫ್ ಅಲಿ 300 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎನ್ನುವುದು ಇಡಿ ಆರೋಪ.


ಕಳೆದ 30 ವರ್ಷಗಳಿಂದ ಯುಎಇಯಲ್ಲಿ ಉದ್ಯಮಿಯಾಗಿರುವ ಕೇರಳ ಮೂಲದ ಯೂಸುಫ್ ಅಲಿಯವರು ಲುಲು ಮಾಲ್’ಗಳ ಸರಣಿಗಳನ್ನು ಸಾಕಷ್ಟು ಹೊಂದಿದ್ದಾರೆ. ಕೇರಳದ ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರೊಂದಿಗೆ ಅಲಿಯವರಿಗೆ ಉತ್ತಮ ಸಂಬಂಧವಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಲಿಯವರು ಕಾಂಗ್ರೆಸ್, ಎಡ ಪಕ್ಷಗಳ ಜೊತೆಗಿರುವಂತೆಯೇ ಬಿಜೆಪಿ ನಾಯಕರ ಸಂಗಡವೂ ಸಂಬಂಧ ಕುದುರಿಸಿಕೊಂಡಿದ್ದಾರೆ.


ಯೂಸುಫ್ ಅಲಿಯವರ ಕಂಪೆನಿಗಳು 94% ಷೇರುಗಳು ಕೇಮನ್ ದ್ವೀಪದ ಸಂಸ್ಥೆಗಳೊಡನೆ ಸಂಬಂಧ ಹೊಂದಿದೆ. ಉಳಿಕೆ 6% ಷೇರುಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಿರಿಯ ಮಗ ವಿವೇಕ್ ದೋವಲ್ ಹೆಸರಿನಲ್ಲಿವೆ. 2018ರಲ್ಲಿ ಯೂಸುಫ್ ಅಲಿಯವರು ತನ್ನ ಯುಎಇ ಮನೆಯಲ್ಲಿ ರಾಹುಲ್ ಗಾಂಧಿಯವರಿಗೆ ಆತಿಥ್ಯ ನೀಡಿದ್ದರು.

Join Whatsapp
Exit mobile version