Home ಟಾಪ್ ಸುದ್ದಿಗಳು ಆಂಧ್ರ ಮುಖ್ಯಮಂತ್ರಿಗೆ ಈಡಿ ಸಮನ್ಸ್

ಆಂಧ್ರ ಮುಖ್ಯಮಂತ್ರಿಗೆ ಈಡಿ ಸಮನ್ಸ್

ಅಸಮಾನ ಆಸ್ತಿ ಹಂಚಿಕೆ ಪ್ರಕ್ರರಣಕ್ಕೆ ಸಂಬಂಧಿಸಿದಂತೆ ಸೋಮವಾರದಂದು ತನ್ನ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಈಡಿ) ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಗೆ ಸೂಚನೆ ನೀಡಿರುವುದಾಗಿ ಎಂದು ನ್ಯೂಸ್ 18 ವರದಿ ಮಾಡಿದೆ.

ರಾಜ್ಯದಲ್ಲಿ ಅವರ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಔಷಧೀಯ ಸಂಸ್ಥೆಗಳಿಗೆ ಭೂಮಿ ಹಂಚಿಕೆ ಮಾಡಿರುವುದರಲ್ಲಿ ಉಂಟಾಗಿರುವ ಅವ್ಯವಸ್ಥೆಯ ಕುರಿತು ತನಿಖೆ ನಡೆಸಲಾಗುತ್ತಿದೆಯೆಂದು ಹೇಳಲಾಗಿದೆ.

ಮುಖ್ಯಮಂತ್ರಿಯವರಿಗೆ ಮಾತ್ರವಲ್ಲದೆ ವೈ.ಎಸ್.ಆರ್ ಕಾಂಗ್ರೆಸ್ ನಲ್ಲಿ ರಾಜ್ಯಸಭಾ ಸಂಸದರಾಗಿರುವ ವಿಜಯ್ ಸಾಯ್ ರೆಡ್ಡಿ ಮತ್ತು ಮೂರು ಔಷಧ ಕಂಪೆನಿಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಮನ್ಸ್ ಕಳುಹಿಸಲಾಗಿದೆ. ಹೀರೋಸ್ ಡ್ರಗ್ಸ್ ನ ಶ್ರೀನಿವಾಸ ರೆಡ್ಡಿ, ಅರೊಬಿಂದೊ ಕಂಪೆನಿಯ ನಿತ್ಯಾನಂದ ರೆಡ್ಡಿ ಮತ್ತು ಟ್ರೈಡೆಂಟ್ ಲೈಫ್ ಸೈನ್ಸ್ ನ ಶರತ್ ಚಂದ್ರ ರೆಡ್ಡಿ ಹಾಗೂ ಇಬ್ಬರು ಮಾಜಿ ಅಧಿಕಾರಿಗಳಿಗೆ ಸಮನ್ಸ್ ಕಳುಹಿಸಲಾಗಿದೆ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ.

ನ್ಯೂಸ್ 18 ವರದಿಯ ಪ್ರಕಾರ 2004-2009ರ ವೇಳೆ ರಾಜಶೇಖರ ರೆಡ್ಡಿ ಸರಕಾರ ದರ ನಿರ್ಣಯ ಸಮಿತಿಯ ನಿರ್ಣಯಕ್ಕೆ ವಿರುದ್ಧವಾಗಿ  75 ಎಕರೆ ಭೂಮಿಯನ್ನು ಎಕರೆಗೆ ತಲಾ 7 ಲಕ್ಷ ರೂಪಾಯಿ ದರಕ್ಕೆ ಹಂಚಿಕೆ ಮಾಡಿತ್ತು. ಅಲ್ಲದೆ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ಕಾರ್ಪೊರೇಶನ್ ಮೆಡಾಕ್ ಜಿಲ್ಲೆಯಲ್ಲಿ ಅರೊಬಿಂದೊ ಕಂಪೆನಿಗೆ ಮೊದಲು ಹಂಚಿಕೆ ಮಾಡಿದ 30 ಎಕರೆ ಭೂಮಿಗಳನ್ನು ಕಾನೂನು ಬಾಹಿರವಾಗಿ ಟ್ರೈಡೆಂಟ್ ಲೈಫ್ ಸೈನ್ಸಸ್ ಗೆ ವರ್ಗಾವಣೆ ಮಾಡಲಾಗಿತ್ತು. ಕಂಪೆನಿಗಳಿಗೆ ಹಲವು ಪರಿಹಾರ ಮತ್ತು ಪ್ರೋತ್ಸಾಹಕಗಳನ್ನು ಒದಗಿಸುವ ವಿಶೇಷ ಆರ್ಥಿಕ ವಲಯದಲ್ಲಿ ಈ ಭೂಮಿ ಇರುವ ಕಾರಣದಿಂದ ಈ ವರ್ಗಾವಣೆ ಮಹತ್ವವನ್ನು ಪಡೆದುಕೊಂಡಿದೆ.

Join Whatsapp
Exit mobile version