ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ED ಕಚೇರಿಗೆ ಹಾಜರಾಗಲಿದ್ದು, ಕೆಲವೇ ಗಂಟೆಗಳ ಮೊದಲು ಇಡಿ ಸಮನ್ಸ್‌ಗೆ ಪ್ರತಿಕ್ರಿಯಿಸಿ, ಇಡಿ ನೋಟಿಸ್ ಕಾನೂನುಬಾಹಿರ ಎಂದು ಹೇಳಿದ್ದಾರೆ.
ಬಿಜೆಪಿ ತನ್ನ ಹಿತಾಸಕ್ತಿಗಾಗಿ ಕೊಟ್ಟ ಆದೇಶದಿಂದಾಗಿ ನೋಟಿಸ್ ಕಳುಹಿಸಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗೋದನ್ನು ತಡೆಯಲು ನೋಟಿಸ್ ಕಳುಹಿಸಲಾಗಿದೆ. ಇಡಿ ತಕ್ಷಣ ನೋಟಿಸ್ ಹಿಂಪಡೆಯಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಇಂದಿನ ವಿಚಾರಣೆ ಬಳಿಕ ಕೇಜ್ರಿವಾಲ್ ಅವರ ಬಂಧನದ ಸಾಧ್ಯತೆಯನ್ನು ಎಎಪಿ ಹೇಳಿಕೊಂಡಿತ್ತು. ಈಗಾಗಲೇ ಈ ಸಂಬಂಧ ಪ್ಲಾನ್ ಬಿ ಅನ್ನು ಜಾರಿಗೆ ತರಲಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಆದರೆ ಕೇಜ್ರಿವಾಲ್ ಇಡಿ ಸಮನ್ಸ್ ಗೆ ಇಂದು ಹಾಜರಾಗುತ್ತಾರೆಯೇ ಎಂಬುದು ತಿಳಿದು ಬಂದಿಲ್ಲ.