Home ಟಾಪ್ ಸುದ್ದಿಗಳು ದೆಹಲಿ ಸಚಿವ ರಾಜ್ ಕುಮಾರ್ ಆನಂದ್ ಮನೆ ಮೇಲೆ ಇಡಿ ದಾಳಿ

ದೆಹಲಿ ಸಚಿವ ರಾಜ್ ಕುಮಾರ್ ಆನಂದ್ ಮನೆ ಮೇಲೆ ಇಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧವಾಗಿ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಸಂಪುಟದ ಕ್ಯಾಬಿನೆಟ್ ಸಚಿವ ರಾಜ್ ಕುಮಾರ್ ಆನಂದ್ ಅವರ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಶೋಧ ನಡೆಸುತ್ತಿದೆ.

57 ವರ್ಷದ ಆನಂದ್ ಪಟೇಲ್ ನಗರದ ಶಾಸಕ ಮತ್ತು ದೆಹಲಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮತ್ತು ಎಸ್ ಸಿ/ಎಸ್ ಟಿ ಕಲ್ಯಾಣ ಸಚಿವರಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮದ್ಯ ನೀತಿ ಹಗರಣದಲ್ಲಿ ಇಡಿ ಮುಂದೆ ಹಾಜರಾಗುವ ಕೆಲವೇ ಗಂಟೆಗಳ ಮೊದಲು ಆನಂದ್ ಅವರ ಮನೆಯಲ್ಲಿ ದಾಳಿಗಳು ನಡೆದಿವೆ. ಕೇಜ್ರಿವಾಲ್ ಅವರ ಸಹೋದ್ಯೋಗಿ ಮತ್ತು ದೆಹಲಿಯ ಮಾಜಿ ಉಪ ಸಚಿವ ಮನೀಶ್ ಸಿಸೋಡಿಯಾ ಈಗಾಗಲೇ ಇದೇ ಪ್ರಕರಣದಲ್ಲಿ ಜೈಲಲ್ಲಿದ್ದಾರೆ. ಮತ್ತೊಬ್ಬ ಆಪ್ ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸಂಜಯ್ ಸಿಂಗ್ ಕೂಡ ಮದ್ಯ ನೀತಿ ಪ್ರಕರಣದಲ್ಲಿ ಜೈಲಲ್ಲಿದ್ದಾರೆ.

ಇಡಿ ಸಂಸ್ಥೆ ದೆಹಲಿಯ ಒಂಬತ್ತು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.

Join Whatsapp
Exit mobile version