Home ಟಾಪ್ ಸುದ್ದಿಗಳು ದೆಹಲಿ ಸಚಿವ ಸತ್ಯೇಂದ್ರ ಜೈನ್ ನಿವಾಸದಿಂದ 2.85 ಕೋಟಿ ರೂ. ನಗದು, ಚಿನ್ನದ ನಾಣ್ಯ ವಶ:...

ದೆಹಲಿ ಸಚಿವ ಸತ್ಯೇಂದ್ರ ಜೈನ್ ನಿವಾಸದಿಂದ 2.85 ಕೋಟಿ ರೂ. ನಗದು, ಚಿನ್ನದ ನಾಣ್ಯ ವಶ: ಇಡಿ ಸ್ಪಷ್ಟನೆ

ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧಿತ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸದಿಂದ 2.85 ಕೋಟಿ ರೂ. ನಗದು, 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಮಂಗಳವಾರ ಸ್ಪಷ್ಟಪಡಿಸಿದೆ.

ಈ ಕುರಿತು ತನ್ನ ಹೇಳಿಕೆ ಬಿಡುಗಡೆಗೊಳಿಸಿರುವ ಇಡಿ, ನಗದು ಮತ್ತು ನಾಣ್ಯಗಳನ್ನು ರಹಸ್ಯ ಸ್ಥಳಗಳಲ್ಲಿ ಇರಿಸಲಾಗಿದೆ. ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಚಿವ ಸತ್ಯೇಂದ್ರ ಅವರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ಮಧ್ಯೆ ಇಡಿ ದೆಹಲಿ ಮತ್ತು ಕೆಲವು ನೆರೆಯ ಸ್ಥಳಗಳಲ್ಲಿ ಆಭರಣ ಸೇರಿದಂತೆ ಸುಮಾರು 7 ಸ್ಥಳಗಳಲ್ಲಿ ಶೋಧ ನಡೆಸಿತ್ತು.

57 ವರ್ಷದ ಜೈನ್ ಅವರನ್ನು ಮೇ 30 ರಂದು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ಬಂಧಿಸಿದ್ದು, ಜೂನ್ 9 ರವರೆಗೆ ತನ್ನ ಕಸ್ಟಡಿಯಲ್ಲಿರಿಸಿದೆ.

Join Whatsapp
Exit mobile version