Home ಟಾಪ್ ಸುದ್ದಿಗಳು SDPI ಕಚೇರಿಗಳ ಮೇಲೆ ED ದಾಳಿ, ದ್ವೇಷ ರಾಜಕೀಯದ ಮುಂದುವರಿದ ಭಾಗ: ಅಬ್ದುಲ್ ಮಜೀದ್

SDPI ಕಚೇರಿಗಳ ಮೇಲೆ ED ದಾಳಿ, ದ್ವೇಷ ರಾಜಕೀಯದ ಮುಂದುವರಿದ ಭಾಗ: ಅಬ್ದುಲ್ ಮಜೀದ್

0

ದಿನಾಂಕ :06 ಮಾರ್ಚ್ 2025, ಇಂದು ಪೂರ್ವಾಹ್ನ ಕರ್ನಾಟಕ ಒಳಗೊಂಡಂತೆ ದೇಶದ ಹಲವು ಭಾಗಗಳಲ್ಲಿ ED ದಾಳಿಸಿದ್ದು ಇದು ಮೋದಿ ಸರ್ಕಾರದ ದ್ವೇಷ ರಾಜಕೀಯದ ಮುಂದುವರಿದ ಭಾಗವೆಂದು SDPI ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾಷ್ಟ್ರೀಯ ಅಧ್ಯಕ್ಷರಾದ MK ಫೈಝಿಯವರನ್ನು ಅನ್ಯಾಯವಾಗಿ ಬಂಧನದಲ್ಲಿಟ್ಟಿರುವ ವ್ಯವಸ್ಥೆ, ದೇಶದಲ್ಲಿ ಬಿನ್ನಾಭಿಪ್ರಾಯದ ಧ್ವನಿಗಳನ್ನು ಮೊಟಕುಗೊಳಿಸುವ ಒಕ್ಕೂಟ ಸರ್ಕಾರದ ಷಡ್ಯಂತ್ರವಾಗಿದೆ ಈ ರೀತಿಯ ಏಕಾ ಏಕಿ ದಾಳಿಗಳು, ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಅಬ್ದುಲ್ ಮಜೀದ್ ಅವರು ಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ವೇಗ ಪಡೆಯುತ್ತಿರುವ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನದ ಭಾಗವಾಗಿ ಮೋದಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿದೆ. ಆದರೆ. SDPI ಯ ಯಾವುದೇ ರೀತಿಯ ಸಂವಿಧಾನಾತ್ಮಕ ಹೋರಾಟಗಳನ್ನು ಒಕ್ಕೂಟ ಸರ್ಕಾರದ ಈ ರೀತಿಯ ಬೆದರಿಸುವ ಪ್ರಯತ್ನಗಳಿಂದ ತಡೆಯಲು ಸಾಧ್ಯವಿಲ್ಲ ಪಕ್ಷವು ಇನ್ನಷ್ಟು ದೃಢತೆಯಿಂದ ಮತ್ತು ಶಕ್ತಿಯಿಂದ ತನ್ನ ಕಾನೂನಾತ್ಮಕ ಮತ್ತು ರಾಜಕೀಯ ಹೋರಾಟ ಮುಂದುವರಿಸಲಿದೆ. ಯಾವುದೇ ರೀತಿಯ ಹತ್ತಿಕ್ಕುವ ಪ್ರಯತ್ನಗಳಿಂದ ನಮ್ಮನ್ನು ಧೃತಿಗೆಡಿಸಲು ಸಾಧ್ಯವಿಲ್ಲ ಎಂದು SDPI ರಾಜ್ಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಿಳಿಸಿದ್ದಾರೆ. ನಮ್ಮ ಪಕ್ಷದ ಮೇಲೆ ನಡೆಯುತ್ತಿರುವ ರಾಜಕೀಯ ಪಿತೂರಿಯನ್ನು, ಕಾನೂನಾತ್ಮಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಎದುರಿಸಲಿದ್ದೇವೆ. ಒಂದು ರಾಜಕೀಯ ಪಕ್ಷವಾಗಿ ನಮ್ಮ ವ್ಯವಹಾರಗಳು ಸಂವಿಧಾನಾತ್ಮಕವಾಗಿ ಪಾರದರ್ಶಕವಾಗಿದ್ದು, ತನಿಖಾ ಸಂಸ್ಥೆಗಳ ತನಿಖೆಗೆ ಸಹಕಾರ ನೀಡುತ್ತೇವೆ.

NO COMMENTS

LEAVE A REPLY

Please enter your comment!
Please enter your name here

Exit mobile version