Home ಟಾಪ್ ಸುದ್ದಿಗಳು ಇಡಿ ದಾಳಿ । ಅಟ್ಲಾಸ್ ಜ್ಯುವೆಲ್ಲರ್ಸ್ ನ 26.59 ಕೋಟಿ ಮೌಲ್ಯದ ಚಿನ್ನ ಜಪ್ತಿ

ಇಡಿ ದಾಳಿ । ಅಟ್ಲಾಸ್ ಜ್ಯುವೆಲ್ಲರ್ಸ್ ನ 26.59 ಕೋಟಿ ಮೌಲ್ಯದ ಚಿನ್ನ ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಅಟ್ಲಾಸ್ ಜ್ಯುವೆಲ್ಲರಿ ಇಂಡಿಯಾ ಲಿಮಿಟೆಡ್ ನಿಂದ 26.59 ಕೋಟಿ ರೂ. ಮೌಲ್ಯದ ಹೂಡಿಕೆ ಹಣ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ವಾರ ಮುಂಬೈ, ಬೆಂಗಳೂರು ಮತ್ತು ದೆಹಲಿ ಸೇರಿ ಮೂರು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಟ್ಲಾಸ್ ಜ್ಯುವೆಲ್ಲರಿ ಕಂಪೆನಿ PMLA ಕಾಯ್ದೆಯ ಸಂಪೂರ್ಣ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಕಂಪೆನಿಯಲ್ಲಿ ಹೂಡಿಕೆಯಾಗಿದ್ದ ಹಣ ಹಾಗೂ ಚಿನ್ನಾಭರಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಜಪ್ತಿ ಸಂಬಂಧ ಅಟ್ಲಾಸ್ ಆಡಳಿತ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸುತ್ತಿದೆ. ಈ ಕುರಿತು ಜಾರಿ ನಿರ್ದೇಶನಾಲಯ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

Join Whatsapp
Exit mobile version