Home ಟಾಪ್ ಸುದ್ದಿಗಳು ಮಂತ್ರಿ ಗ್ರೂಪ್‌ನ 300 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಿದ ED

ಮಂತ್ರಿ ಗ್ರೂಪ್‌ನ 300 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಿದ ED

ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ರಿಯಲ್‌ ಎಸ್ಟೇಟ್ ಕಂಪನಿಯಾದ ಮಂತ್ರಿ ಗ್ರೂಪ್ ನ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕಂಪನಿಗೆ ಸೇರಿದ 300.4 ಕೋಟಿ ರೂಪಾಯಿ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಸಾರ್ವಜನಿಕರಿಗೆ ಆಕರ್ಷಕ ಬೆಲೆಯಲ್ಲಿ ಪ್ಲ್ಯಾಟ್ ನಿರ್ಮಿಸಿಕೊಡುವುದಾಗಿ ನಂಬಿಸಿ ಕಂಪನಿಯು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದಿತ್ತು. ಏಳು ವರ್ಷವಾದರೂ ಪ್ಲ್ಯಾಟ್ ನಿರ್ಮಿಸದೆ ಹಣ ಇತರ ಉದ್ದೇಶಗಳಿಗೆ ಹಣ ವರ್ಗಾವಣೆ ಸಂಬಂಧ ಕಂಪನಿ ವಿರುದ್ಧ ಸುಬ್ರಮಣ್ಯನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆವ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು.ತನಿಖಾ ಹಂತದಲ್ಲಿ ಅಕ್ರಮ ಎಸಗಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದರಿಂದ ಕಳೆದ ಜೂನ್ 24ರಂದು ಮಾಲೀಕ ಹಾಗೂ ಎಂಡಿಯಾಗಿರುವ ಸುಶೀಲ್ ಪಾಂಡುರಂಗನನ್ನು ಬಂಧಿಸಿದ್ದರು.

Join Whatsapp
Exit mobile version