ನವದೆಹಲಿ: ಭಾರತಕ್ಕೆ ಬರುತ್ತಿರುವ ಅಫ್ಘಾನಿಸ್ತಾನದವರಿಗೆ ಆರು ತಿಂಗಳ ಇ- ವೀಸಾ ನೀಡಲಾಗುತ್ತದೆ. ಆಮೇಲೆ ಅದನ್ನು ವಾಪಾಸು ಪಡೆಯಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಟಿ ಹೇಳಿದರು. ಆಗಸ್ಟ್ 12 -14ರ ನಡುವೆ ರಾಯಭಾರಿ ಕಚೇರಿಯಿಂದ 1,000 ವೀಸಾ ಕಳುವಾಗಿತ್ತು. ಸಾವಿರಾರು ವೀಸಾ ರದ್ದು ಪಡಿಸಿದ ಭಾರತ ಸರಕಾರವು ಇ- ವೀಸಾ ಆರಂಭಿಸಿದೆ. ಆದರೂ ಕಳುವಾದ ವೀಸಾಗಳು ದುರುಪಯೋಗ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಇದರ ನಡುವೆ ಕಾಬೂಲಿನಲ್ಲಿ ಅಫಘಾನಿಸ್ತಾನದ ಪಾಸ್ ಪೋರ್ಟ್ ಮತ್ತು ಭಾರತದ ವೀಸಾ ಹೊಂದಿದ್ದ ಏಜೆನ್ಸಿಯವರ ಮೇಲೆ ದಾಳಿ ನಡೆದಿದೆ. ಇದು ಪರಿಸ್ಥಿತಿ ಬಿಗಡಾಯಿಸಿರುವ ಇನ್ನೊಂದು ಲಕ್ಷಣವಾಗಿದೆ ಎಂದೂ ಅರಿಂದಮ್ ತಿಳಿಸಿದರು.