Home ಟಾಪ್ ಸುದ್ದಿಗಳು ಮೀರಾಬಾಯಿ ಚಾನುಗೆ ಮಣಿಪುರ ಸರ್ಕಾರದಿಂದ DYSP ಹುದ್ದೆ ಗೌರವ!

ಮೀರಾಬಾಯಿ ಚಾನುಗೆ ಮಣಿಪುರ ಸರ್ಕಾರದಿಂದ DYSP ಹುದ್ದೆ ಗೌರವ!

ಇಂಫಾಲ್: ಸೈಖೋಮ್ ಮೀರಾಬಾಯಿ ಚಾನು ಅವರನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ (ಕ್ರೀಡಾ ಕೋಟಾ) ನೇಮಕ ಮಾಡಲು ಮಣಿಪುರ ಸರ್ಕಾರ ನಿರ್ಧರಿಸಿದೆ.

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸೈಖೋಮ್ ಮೀರಾಬಾಯಿ ಚಾನು ಅವರನ್ನು ಕ್ರೀಡಾ ಕೋಟಾದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ನೇಮಕ ಮಾಡಲು ಮಣಿಪುರ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನ 49 ಕೆಜಿ ವಿಭಾಗದಲ್ಲಿ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಅವರು ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ವೇಟ್ ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ನಂತರ ಚಾನು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

Join Whatsapp
Exit mobile version