ನವದೆಹಲಿ, ಜು.26: ಪ್ರಸ್ತುತ ನಡೆಯುತ್ತಿರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ಕೆಲವು ತಿದ್ದುಪಡಿ ಸಹಿತ 17 ಮಸೂದೆಗಳನ್ನು ಪಾಸು ಮಾಡಿಕೊಳ್ಳಲು ಎಲ್ಲ ಬಗೆಯ ಸಿದ್ಧತೆಯನ್ನು ಕೇಂದ್ರ ಸರಕಾರವು ಮಾಡಿಕೊಂಡಿದೆ.
ಮುಖ್ಯವಾಗಿ ಇದರಲ್ಲಿ ರಕ್ಷಣಾವಶ್ಯಕ ವಸ್ತು ಖರೀದಿ, ಕಲ್ಲಿದ್ದಲು ಇರುವ ಪ್ರದೇಶಗಳ ವಶಪಡಿಸಿಕೊಳ್ಳುವಿಕೆಗೆ ಸಾಕಷ್ಟು ವಿರೋಧವಿದೆ. ದಿವಾಳಿ ತಿದ್ದುಪಡಿ ಮಸೂದೆ ಮತ್ತು ಪಾಲುದಾರಿಕೆಯಲ್ಲಿ ಹೊಣೆಗಾರಿಕೆಯ ಹಂಚಿಕೆ ತಮ್ಮ ಉದ್ಯಮಿ ಮಿತ್ರರಿಗಾಗಿಯೇ ತರುತ್ತಿದ್ದಾರೆ ಎನ್ನುವ ಅನುಮಾನವನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸಿವೆ.