ಬೆಂಗಳೂರು: ವಿಚ್ಛೇದನಾ ಕೋರಿ ನಟ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ತಮ್ಮ ಮೊದಲನೇ ಪತ್ನಿ ನಾಗರತ್ನ ಬಳಿ ವಿಚ್ಛೇದನಾ ಕೋರಿ 2018 ರಲ್ಲಿ ನಟ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಇಂದು 2ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.
ನಾಗರತ್ನ ಮತ್ತು ದುನಿಯಾ ವಿಜಯ್ ಅವರ ಸಂಸಾರದಲ್ಲಿ ಹಲವು ವರ್ಷಗಳ ಹಿಂದೆಯೇ ಬಿರುಕು ಮೂಡಿತ್ತು. ಆದ್ದರಿಂದ 2018ರಲ್ಲಿ ವಿಜಯ್ ಅವರು ಡಿವೋರ್ಸ್ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರು ಸಿದ್ಧರಿದ್ದಾರೆ. ಅಲ್ಲದೇ, ಪತ್ನಿಗೆ ಜೀವನಾಂಶ ನೀಡಲು ಕೂಡ ಅವರು ಒಪ್ಪಿದ್ದಾರೆ. ಆದರೆ, ಪ್ರತಿ ಬಾರಿ ಕೋರ್ಟ್ನಲ್ಲಿ ವಿಚಾರಣೆ ನಡೆದಾಗ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಕೊಳ್ಳಲಿಲ್ಲ. ಆದ್ದರಿಂದ ಪ್ರಕರಣ ಈತನ ಮುಂದೂಡಿಕೊಂಡು ಬಂದಿತ್ತು.