Home ಟಾಪ್ ಸುದ್ದಿಗಳು ದುಬೈ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜೂನ್ 19ರಂದು ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್...

ದುಬೈ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜೂನ್ 19ರಂದು ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ

ದುಬೈ: ದುಬೈನ ಔದ್ ಮೆಹ್ತಾದಲ್ಲಿರುವ ಲತೀಫಾ ಆಸ್ಪತ್ರೆಯಲ್ಲಿ ದುಬೈ ಆರೋಗ್ಯ ಪ್ರಾಧಿಕಾರ (ಡಿಎಚ್ ಎ) ಸಹಯೋಗದೊಂದಿಗೆ   ಜೂನ್ 19 ರಂದು ದುಬೈ ಸರ್ಕಾರದ ಸಮುದಾಯ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಮಾರ್ಗಸೂಚಿಗಳಿಗೆ ಅನುಗುಣವಾಗಿ ರಕ್ತದಾನ ಶಿಬಿರವನ್ನು ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ (ಕೆಎಸ್ ಸಿಸಿ) ಆಯೋಜಿಸಿದೆ.

ರಕ್ತದಾನ ಶಬಿರವು ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನಡೆಯಲಿದ್ದು, 4 ಗಂಟೆಗಳಲ್ಲಿ 200 ದಾನಿಗಳನ್ನು ತಲುಪುವ ಗುರಿಯನ್ನು ಹೊಂದಿದೆ. ‘ರಕ್ತದಾನವು ಒಗ್ಗಟ್ಟಿನ ಕಾರ್ಯ’ ಎಂಬ ಸಂದೇಶವನ್ನು ಎಲ್ಲಾ ಬೆಂಬಲಿಗರಿಗೆ ನೀಡಿದ ಕೆಎಸ್ ಸಿಸಿ, ಎಲ್ಲಾ ಅರ್ಹ ದಾನಿಗಳು ಈ ಪ್ರಯತ್ನದಲ್ಲಿ ಕೈಜೋಡಿಸಿ ಜೀವಗಳನ್ನು ಉಳಿಸುವಂತೆ ಮನವಿ ಮಾಡಿದೆ.

ಡಿಎಚ್ ಎ ಬ್ಲಡ್ ಬ್ಯಾಂಕ್ ಅನ್ನು ಬೆಂಬಲಿಸಲು, ಕೆಎಸ್ ಸಿಸಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಮೂಲಕ  ಅಗತ್ಯವಿರುವ ರೋಗಿಗೆ ಸೂಕ್ತ ಸಮಯದಲ್ಲಿ ರಕ್ತ ಪೂರೈಸುವ ಉಪಕ್ರಮವನ್ನು ಕೈಗೊಂಡಿದೆ. ಎಲ್ಲಾ ಬೆಂಬಲಿಗರು ಮತ್ತು ದಾನಿಗಳು ಉದಾತ್ತ ಉದ್ದೇಶಕ್ಕಾಗಿ ರಕ್ತದಾನ ಮಾಡುವ ತಮ್ಮ ಜೀವ ಉಳಿಸುವ ಕಾರ್ಯವನ್ನು ನೀಡಲು ಮುಂದೆ ಬರಬೇಕೆಂದು ಕೆಎಸ್ ಸಿಸಿ ಪ್ರಕಟನೆಯಲ್ಲಿ ಮನವಿ ಮಾಡಿದೆ. 

ಹೆಚ್ಚಿನ ಮಾಹಿತಿಗಾಗಿ: ದೂರವಾಣಿ: +971 55 450 5431 ಇಮೇಲ್ : kar.sc.club@gmail.com ಇದನ್ನು ಸಂಪರ್ಕಿಸಹುದು.

Join Whatsapp
Exit mobile version