Home ಟಾಪ್ ಸುದ್ದಿಗಳು ದುಬೈ: ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದ ಭಾರತ

ದುಬೈ: ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದ ಭಾರತ

ದುಬೈ: ಭಾರತವು ದುಬೈನ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ.


ಭಾರತದ ವ್ಯಾಪಾರ ವಹಿವಾಟು ವರ್ಷದಿಂದ ವರ್ಷಕ್ಕೆ ವಹಿವಾಟು ಬೆಳವಣಿಗೆಯಾಗುತ್ತಿದ್ದು, 38.5 ಬಿಲಿಯನ್ ದಿರ್ಹಮ್ ನಿಂದ ಶೇ. 74.5ರಷ್ಟು ಏರಿಕೆ ಕಂಡು 67.1 ಬಿಲಿಯನ್ ದಿರ್ಹಮ್ ಗೆ ವಿಸ್ತರಣೆಗೊಂಡಿದೆ. ಈ ಮೂಲಕ ಕ್ರಮವಾಗಿ ಭಾರತ ಎರಡನೇ ಸ್ಥಾನದಲ್ಲಿದ್ದು, ಅಮೆರಿಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.


H1 2021 ರಲ್ಲಿ, ಅಮೆರಿಕ 32 ಬಿಲಿಯನ್ ದಿರ್ಹಮ್ ವ್ಯವಹಾರವನ್ನು ದುಬೈನೊಂದಿಗೆ ಮಾಡಿತ್ತು. ಇದು 31.7 ಬಿಲಿಯನ್ ದಿರ್ಹಮ್ ನಿಂದ ವರ್ಷಕ್ಕೆ 1ರಷ್ಟು ಶೇಕಡಾದಷ್ಟು ಹೆಚ್ಚಾಗಿದೆ. ಸೌದಿ ಅರೇಬಿಯಾ 30.5 ಶತಕೋಟಿ ದಿರ್ಹಮ್ ನೊಂದಿಗೆ 4 ನೇ ಸ್ಥಾನ ಪಡೆದುಕೊಂಡಿದೆ. ಇದು ಶೇ. 26ರಷ್ಟು ವಹಿವಾಟನ್ನು ಹೆಚ್ಚಿಸಿಕೊಂಡಿದೆ. ಈ ಬಳಿಕ ಸ್ವಿಟ್ಜರ್ ಲ್ಯಾಂಡ್ 24.8 ಬಿಲಿಯನ್ ದಿರ್ಹಾಮ್ ವಹಿವಾಟು ಹೊಂದಿದೆ ಎಂದು ಸರ್ಕಾರ ಹೇಳಿದೆ.

Join Whatsapp
Exit mobile version